ಏರ್ ಟೆಲ್, ವೊಡಾಫೋನ್, ಐಡಿಯಾ ಸಂಸ್ಥೆಗಳಿಗೆ ಸೆಡ್ಡುಅಫರ್ ಜೂನ್ 30ರವರೆಗೂ ಮಾತ್ರ ಲಭ್ಯವಿದೆ. 

ಮುಂಬೈ[ಜೂ. 19]: ಏರ್ ಟೆಲ್, ವೊಡಾಫೋನ್, ಐಡಿಯಾ ಮುಂತಾದ ಟೆಲಿಕಾಂ ಸಂಸ್ಥೆಗಳಿಗೆ ಶಾಕ್ ರಿಲಯನ್ಸ್ ಜಿಯೋ ಮತ್ತೊಮ್ಮೆ ಮುಂದಾಗಿದೆ. 
ಈಗಾಗಲೇ ಹಲವು ಭರ್ಜರಿ ಆಫರ್'ಗಳನ್ನು ಪ್ರಕಟಿಸಿರುವ ಜಿಯೋ ಹೊಸ ಆಫರ್ ನಲ್ಲಿ 299 ರೂ.ಗಳಿಗೆ ನಿತ್ಯ 4.5 ಜಿಬಿ , ರೋಮಿಂಗ್ ಒಳಗೊಂಡ ಅನಿಯಮಿತ ಕರೆ, 100 ಎಸ್ಎಂಎಸ್ ನೀಡುವ ಯೋಜನೆ ಪ್ರಕಟಿಸಿದೆ.
ಹೊಸ ಯೋಜನೆಯು ಕೆಳಕಂಡ ವಿವಿಧ ರೀತಿಯ ಆಫರ್ ಗಳನ್ನು ಒಳಗೊಂಡಿದೆ. 

  • 149, 349, 399, 449 ರೂ.ಗಳಿಗೆ ನಿತ್ಯ 3ಜಿಬಿ ಡಾಟಾ
  • 198, 398, 448, 498 ರೂ.ಗಳಿಗೆ ನಿತ್ಯ 3.5ಜಿಬಿ ಡಾಟಾ
  • 299 ರೂ.ಗಳಿಗೆ ನಿತ್ಯ 4.5 ಜಿಬಿ ಡಾಟಾ
  • 509 ರೂ.ಗಳಿಗೆ ನಿತ್ಯ 5.5 ಜಿಬಿ ಡಾಟಾ
  • 799 ರೂ.ಗಳಿಗೆ ನಿತ್ಯ 6.5 ಜಿಬಿ ಡಾಟಾ

ಇವೆಲ್ಲ ಆಫರ್ ಗಳು ಅನಿಯಮಿತ ರೋಮಿಂಗ್ ಒಳಗೊಂಡ ಕರೆ. ನಿತ್ಯ 100 ಸಂದೇಶ ಉಚಿತವಾಗಿರುತ್ತದೆ. ಅವಧಿ 28 ದಿನಗಳು. ಅಫರ್ ಜೂನ್ 30ರವರೆಗೂ ಮಾತ್ರ ಲಭ್ಯವಿದೆ. ಜಿಯೋ ಆಪ್ ಮೂಲಕ 300 ರೂ. ಮೇಲ್ಪಟ್ಟು ರಿಚಾರ್ಜ್ ಮಾಡಿಸಿದರೆ 100 ರೂ. ರಿಯಾಯಿತಿ ದೊರೆಯಲಿದೆ.