Asianet Suvarna News Asianet Suvarna News

ಮತ್ತೊಂದು ದಾಖಲೆ ಬರೆಯಲು ಹೊರಟ ಜಿಯೋ: ಅತೀ ಕಡಿಮೆ ಬೆಲೆಗೆ ಲ್ಯಾಪ್'ಟಾಪ್, ಇದಕ್ಕೆ ಸಿಮ್ ಮೂಲಕವೇ ವೇಗದ ಇಂಟರ್'ನೆಟ್ !

ಜಿಯೋ ಸಂಸ್ಥೆ ಲ್ಯಾಪ್'ಟಾಪ್'ಗಳನ್ನು ತಯಾರಿಸಲು ಮುಂದಾಗಿದ್ದು, ಇದನ್ನು ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಒದಗಿಸಲು ಸಜ್ಜಾಗಿದೆ.

Click Here: ಉಚಿತ ಜಿಯೋ ಆಫರ್ ಇನ್ನಷ್ಟು ತಿಂಗಳು ಮುಂದುವರಿಕೆ : ಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ !

Reliance Jio could launch a laptop with 4G VoLTE SIM support

Click Here: ಉಚಿತ ಜಿಯೋ ಆಫರ್ ಇನ್ನಷ್ಟು ತಿಂಗಳು ಮುಂದುವರಿಕೆ : ಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ !

ಮುಂಬೈ(ಏ.06): ಗ್ರಾಹಕರಿಗೆ 6.5 ತಿಂಗಳು ಉಚಿತ ಇಂಟರ್'ನೆಟ್ ಸೇವೆ ಒದಗಿಸುವುದರೊಂದಿಗೆ ಕೇವಲ 6 ತಿಂಗಳಲ್ಲಿ 10 ಕೋಟಿಗೂ ಹೆಚ್ಚು ಚಂದದಾರರನ್ನು ಹೊಂದಿದ ರಿಲಾಯನ್ಸ್ ಜಿಯೋ ಸಂಸ್ಥೆ ಮತ್ತೊಂದು ಹೊಸ ವಿಕ್ರಮವನ್ನು ಬರೆಯಲು ಮುಂದಾಗಿದೆ.

ಜಿಯೋ ಸಂಸ್ಥೆ ಲ್ಯಾಪ್'ಟಾಪ್'ಗಳನ್ನು ತಯಾರಿಸಲು ಮುಂದಾಗಿದ್ದು, ಇದನ್ನು ಗ್ರಾಹಕರಿಗೆ ಅತೀ ಕಡಿಮೆ ಬೆಲೆಗೆ ಒದಗಿಸಲು ಸಜ್ಜಾಗಿದೆ. ಈ ಲ್ಯಾಪ್'ಗಳಲ್ಲಿ ಇಂಟರ್'ನೆಟ್ ಪಡೆಯಲು ಯಾವುದೇ ಡಾಂಗಲ್, ವೈಫೈ ಅನ್ನು ಪ್ರತ್ಯೇಕ ಕೊಂಡು ಅಳವಡಿಸಬೇಕಾಗಿಲ್ಲ. ಪ್ರಸ್ತುತ ಜಿಯೋ 4ಜಿ ಸಿಮ್' ಅನ್ನು ಲ್ಯಾಪ್'ಟಾಪ್'ಗೆ ಸಂಪರ್ಕಿಸಿದರೆ ಅತೀ ವೇಗದ  ಇಂಟರ್'ನೆಟ್ ಸೌಲಭ್ಯ ಪಡೆಯಬಹುದು.

ತೈವಾನ್ ದೇಶದ 'ಫಾಕ್ಸ್ಕಾನ್' ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರುವ ಜಿಯೋ ಸಿಮ್'ಗೆ ಬೆಂಬಲ ನೀಡುವ ವಿಂಡೋಸ್ ಸೇರಿದಂತೆ ಮುಂತಾದ ಸೌಲಭ್ಯವಿರುವ ಲ್ಯಾಪ್'ಟಾಪ್ ತಯಾರಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಗೊಳ್ಳಲಿದೆ.

ಈ ಲ್ಯಾಪ್'ಟಾಪ್' 13.3 ಇಂಚಿನ ಫೂಲ್ ಹೆಚ್'ಡಿ ರೆಸಲ್ಯೂಶನ್'ನೊಂದಿಗಿನ ಡಿಸ್'ಪ್ಲೆ, 4ಜಿಬಿ ಟಾಮ್, 128 ಜಿಬಿ ಎಸ್'ಎಸ್'ಡಿ ಜೊತೆಗೆ ಹೆಚ್'ಡಿ ಕ್ಯಾಮರಾ ಅನುಕೂಲತೆಗಳಿರುತ್ತವೆ. ಬೇರೆ ಲ್ಯಾಪ್'ಟಾಪ್ ಸಂಸ್ಥೆಗಳಿಗಿಂತ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಲು ಜಿಯೊ ಮುಂದಾಗಿದೆ.

ಈಗಾಗಲೇ 1ಜಿಬಿ ಉಚಿತ ಇಂಟರ್'ನೆಟ್ ಸೇವೆಯನ್ನು 15 ದಿನಗಳು ವಿಸ್ತರಿಸಿರುವ ಜಿಯೋ ಅಷ್ಟು ದಿನಗಳಲ್ಲಿ 303 ರೂ. ಪಾವತಿಸಿದರೆ ಈಗಿರುವ ಸೌಲಭ್ಯಗಳು ಮತ್ತೆ 3 ತಿಂಗಳು ಮುಂದುವರಿಯುತ್ತವೆ.

Latest Videos
Follow Us:
Download App:
  • android
  • ios