Asianet Suvarna News Asianet Suvarna News

4ಜಿ ಡೌನ್'ಲೋಡ್ ವಿಚಾರದಲ್ಲಿ ಜಿಯೋ ಈಗಲೂ ನಂ.1...!

ಜಿಯೋ ನಂತರದ ಸ್ಥಾನವನ್ನು ಐಡಿಯಾ(13,709 ಎಂಬಿಪಿಎಸ್) ಮತ್ತು ವೋಡಾಫೋನ್(13,387ಎಂಬಿಪಿಎಸ್) ಪಡೆದುಕೊಂಡಿವೆ.

Reliance Jio 4G Download Speed Hits All Time High in May

ಮುಂಬೈ(ಜೂ.06): ಉಚಿತ ಕರೆ ಹಾಗೂ ಇಂಟರ್'ನೆಟ್ ಸೌಲಭ್ಯ ಒದಗಿಸುವ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ರಿಲಾಯನ್ಸ್ ಜಿಯೋ ಕಂಪನಿಯು ವೇಗದ ಡೌನ್'ಲೋಡ್ ಸೌಲಭ್ಯ ಒದಗಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ

ಹೌದು ಟ್ರಾಯ್ ಪ್ರಕಟಿಸಿದ ನೂತನ ವರದಿಯಂತೆ, ಜಿಯೋ ನೆಟ್'ವರ್ಕ್ ಕಳೆದ ಮೇ ತಿಂಗಳಲ್ಲಿ 19.123 ಎಂಬಿಪಿಎಸ್ ಡೇಟಾ ಸ್ಪೀಡ್ ಒದಗಿಸುವ ಮೂಲಕ ಮೊದಲ ಸ್ಥಾನದಲ್ಲೇ ಮುಂದುವರೆದಿದೆ.ಇದು ಇತರೆ ಎಲ್ಲಾ ಟೆಲಿಕಾಂ ಕಂಪನಿಗಳಿಗಿಂತ ಹೆಚ್ಚು ಎಂದು ಟ್ರಾಯ್ ವರದಿ ಬಹಿರಂಗಪಡಿಸಿದೆ.

ಜಿಯೋ ನಂತರದ ಸ್ಥಾನವನ್ನು ಐಡಿಯಾ(13,709 ಎಂಬಿಪಿಎಸ್) ಮತ್ತು ವೋಡಾಫೋನ್(13,387ಎಂಬಿಪಿಎಸ್) ಪಡೆದುಕೊಂಡಿವೆ.

ಡೌನ್‌ಲೋಡ್ ಸ್ಪೀಡ್ ವಿಚಾರದಲ್ಲಿ ಜಿಯೊ ಕಳೆದ ನಾಲ್ಕು ತಿಂಗಳಿಂದ ಸತತವಾಗಿ ಮೊದಲ ಸ್ಥಾನದಲ್ಲೇ ಮುಂದುವರಿಯುತ್ತಿದೆ.

ಮೊದಲ 6 ತಿಂಗಳ ಕಾಲ ಉಚಿತ ಕರೆ ದರ ಹಾಗೂ ಇಂಟರ್'ನೆಟ್ ಸೌಲಭ್ಯ ಒದಗಿಸಿದ್ದ ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಸಂಸ್ಥೆ ಇದೀಗ ಟ್ಯಾರೀಫ್ ಯೋಜನೆ ಪ್ರಕಟಿಸಿದ್ದು, ಅದೇ ಸೌಲಭ್ಯಕ್ಕೆ ದಿನವೊಂದಕ್ಕೆ ಗರಿಷ್ಟ 10 ರುಪಾಯಿ ಚಾರ್ಜ್ ಮಾಡುತ್ತಿದೆ.

Follow Us:
Download App:
  • android
  • ios