ವಾಟ್ಸ್‌’ಆ್ಯಪನ್ನು ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಖರೀದಿಸಿದ್ದಾರಾ?

Reliance Buys WhatsApp Message On WhatsApp Is A Scam
Highlights

ಜನರು ಹೆಚ್ಚಾಗಿ ಬಳಸುತ್ತಿರುವ ವಾಟ್ಸ್‌ಆ್ಯಪ್‌ ಅನ್ನು ರಿಲಯನ್ಸ್‌ ಕಂಪನಿ ಮುಖ್ಯಸ್ಥ ಮುಕೇಶ್‌ ಅಂಬಾನಿ ಖರೀದಿಸಿದ್ದಾರೆ ಎಂಬಂತಹ ಸಂದೇಶವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಜನರು ಹೆಚ್ಚಾಗಿ ಬಳಸುತ್ತಿರುವ ವಾಟ್ಸ್‌ಆ್ಯಪ್‌ ಅನ್ನು ರಿಲಯನ್ಸ್‌ ಕಂಪನಿ ಮುಖ್ಯಸ್ಥ ಮುಕೇಶ್‌ ಅಂಬಾನಿ ಖರೀದಿಸಿದ್ದಾರೆ ಎಂಬಂತಹ ಸಂದೇಶವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸಂದೇಶದಲ್ಲಿ, ‘ನಾನು ವಾಟ್ಸ್‌ಆ್ಯಪ್‌ ನಿರ್ದೇಶಕ ವರುಣ್‌ ಪುಲ್ಯಾನಿ. ವಾಟ್ಸ್‌ಆ್ಯಪ್‌ ಅನ್ನು ಮುಕೇಶ್‌ ಅಂಬಾನಿ ಅವರಿಗೆ 19 ಬಿಲಿಯನ್‌ ಡಾಲರ್‌ಗೆ ಮಾರಾಟ ಮಾಡಲಾಗಿದೆ.

ಇನ್ನು ಮುಂದೆ ವಾಟ್ಸ್‌ಆ್ಯಪ್‌ ಮುಕೇಶ್‌ ಅಂಬಾನಿ ಒಡೆತನದಲ್ಲಿರಲಿದೆ. ಈ ಸಂದೇಶವನ್ನು 10ಕ್ಕಿಂತ ಹೆಚ್ಚು ಜನರಿಗೆ ಕಳುಹಿಸಿದ ನಂತರ ನಿಮ್ಮ ಫೇಸ್‌ಬುಕ್‌ ಸೇವೆಯೊಂದಿಗೆ ವಾಟ್ಸ್‌ಆ್ಯಪ್‌ ಸಕ್ರಿಯವಾಗಲಿದೆ ಹಾಗೂ 24 ಗಂಟೆಯೊಳಗೆ ಲೋಗೋ ನೀಲಿ ಬಣ್ಣಕ್ಕೆ ಪರಿವರ್ತನೆಯಾಗಲಿದೆ. ಒಂದು ವೇಳೆ ಈ ಸಂದೇಶವನ್ನು ನಿರ್ಲಕ್ಷಿಸಿದಲ್ಲಿ 48 ಗಂಟೆಯೊಳಗಾಗಿ ನಿಮ್ಮ ವಾಟ್ಸ್‌ಆ್ಯಪ್‌ ಡಿಲೀಟ್‌ ಆಗಲಿದೆ.

ಮತ್ತೊಮ್ಮೆ ವಾಟ್ಸ್‌ಆ್ಯಪ್‌ ಖಾತೆ ತೆರೆಯಲು ಹಣ ಪಾವತಿಸಬೇಕಾಗುತ್ತದೆ. ಅಲ್ಲದೆ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ನಂಬರ್‌ಗಳು ಡಿಲೀಟ್‌ ಆಗಲಿವೆ. ನೀವಿದನ್ನು ನಂಬದಿದ್ದಲ್ಲಿ ಬೆಳಿಗ್ಗೆ 6 ಗಂಟೆ ವೇಳೆಗೆ ನಿಮ್ಮ ವಾಟ್ಸ್‌ಆ್ಯಪ್‌ ಡಿಲೀಟ್‌ ಆಗಲಿದೆ. ವಾಟ್ಸ್‌ಆ್ಯಪ್‌ ಲೋಗೋ ನೀಲಿ ಬಣ್ಣಕ್ಕೆ ತಿರುಗಬೇಕೆಂದಲ್ಲಿ ಈ ಕೆಳಗಿನ ಲಿಂಕ್‌ ಒತ್ತಿ’ ಎಂದು ಹೇಳಲಾಗಿದೆ.

ಆದರೆ ನಿಜಕ್ಕೂ ವಾಟ್ಸ್‌ಆ್ಯಪನ್ನು ಮುಕೇಶ್‌ ಅಂಬಾನಿ ಖರೀದಿಸಿದ್ದು ನಿಜವೇ ಎಂದರೆ ಇದೊಂದು ಸುಳ್ಳು ಸುದ್ದಿ. 2014-15ರಿಂದಲೂ ಈ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮುಕೇಶ್‌ ಅಂಬಾನಿ ವಾಟ್ಸ್‌ಆ್ಯಪ್‌ ಖರೀದಿಸಿಲ್ಲ. ವಾಟ್ಸ್‌ಆ್ಯಪ್‌ ಸಿಇಒ, ನಿರ್ದೇಶಕರು ಎಂದು ವಿವಿಧ ಹೆಸರಿನಲ್ಲಿ ಈ ಸಂದೇಶವನ್ನು ಕಳಿಸಲಾಗುತ್ತಿದೆ. ಒಂದು ವೇಳೆ ನೀವು ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದಲ್ಲಿ ನಿಮ್ಮ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಗಳು ಕಳ್ಳರ ಪಾಲಾಗುತ್ತದೆ. ನಿಮ್ಮ ಮೊಬೈಲ್‌ಗೆ ವೈರಸ್‌ಗಳು ಸೇರಿಕೊಳ್ಳುತ್ತವಷ್ಟೆ

loader