ಬೆಂಗಳೂರು[ಆ. 19]  ಪ್ರಭಾವಿ ಸೋಶಿಯಲ್ ಮೀಡಿಯಾ ಎಂದು ಕರೆಸಿಕೊಂಡಿರುವ್ ಟ್ವಿಟರ್ ನಲ್ಲಿ #ReleaseKannadaActivists ಟ್ರೆಂಡ್ ಆಗುತ್ತಿದೆ. ಬಂಧನ ಮಾಡಿರುವ ಕನ್ನಡ ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಮಾಜಿ ಸಿಎಂ ಸಿದ್ದರಾಮಯ್ಯ,ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ ಆದಿಯಾಗಿ ಅನೇಕರು ಆಗ್ರಹಿಸಿದ್ದಾರೆ.

ಹಿಂದಿ ಬ್ಯಾನರ್ ಹರಿದ ಕಾರಣಕ್ಕಾಗಿ ಕನ್ನಡ ಹೋರಾಟಗಾರರ ಬಂಧನ ಮಾಡಲಾಗಿದ್ದು ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗಳಿಗೂ ವೇದಿಕೆ ಸಿದ್ಧವಾಗಿದೆ. ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಹರೀಶ್ ಕುಮಾರ್ ಅವರನ್ನು  ಬಿಡುಗಡೆ ಮಾಡಬೇಕು ಎಂಬ ಒತ್ತಾಯ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಬೆಂಗಳೂರಿನ ಪುರಭವನದ ಮುಂದೆ ಕನ್ನಡ ಹೋರಾಟಗಾರರು ಪ್ರತಿಭಟನೆ ಸಹ ನಡೆಸಿ ಘೊಷಣೆ ಕೂಗಿದ್ದಾರೆ.

ಹಿಂದಿ ಬ್ಯಾನರ್ ಹರಿದ ವಿಚಾರ ಕುರಿತಂತೆ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು. ಇದಾದ ಮೇಲೆ ಸಾಮಾಜಿಕ ತಾಣದಲ್ಲಿ ವ್ಯಾಪಕ ಚರ್ಚೆ ಶುರುವಾಯಿತು. ತೇಜಸ್ವಿ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿರುವ ಹೋರಾಟಗಾರರು ಹಿಂದಿ ಹೇರಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.