ಬೆಂಗಳೂರಿನ ರೂಪದರ್ಶಿ ರೇಖಾ ಸಿಂಧು ಇಂದು ಬೆಳಗ್ಗೆ ಅಪಘಾತದಲ್ಲಿ ಮೃತಪಟ್ಟಿದ್ದು,  ಜನರಲ್ಲಿ ಗೊಂದಲಗಳು ಉಂಟಾಗಿರುವ ಹಿನ್ನೆಲೆಯಲ್ಲಿ ಜನಪ್ರಿಯ ಕಿರುತೆರೆ ನಟಿ ರೇಖಾ ಪ್ರತಿಕ್ರಿಯೆ ನೀಡಿದ್ದಾರೆ.ತಾನು ಶೃಂಗೇರಿಯಲ್ಲಿದ್ದು ಸುರಕ್ಷಿತವಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. ರೇಖಾ ಕೃಷ್ಣಪ್ಪ ಹಲವಾರು ಕನ್ನಡ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಸತ್ಯ ಹರಿಶ್ಚಂದ್ರ ಸಿನೆಮಾ ಸೆರಿದಂತೆ ಹಲವಾರು ಕನ್ನಡ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.