ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದ ಮಹಿಳಾ ಹೋರಾಟಗಾರ್ತಿ ರೆಹಾನಾ! ಫೇಸ್ಬುಕ್ ಪೋಸ್ಟ್ ಮೂಲಕ ಅಯ್ಯಪ್ಪ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದ ಅರೋಪ ಎದುರಿಸುತ್ತಿದ್ದ ರೆಹಾನಾ
ಕೊಚ್ಚಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದ ಮಹಿಳಾ ಹೋರಾಟಗಾರ್ತಿ ರೆಹಾನಾ ಫಾತಿಮಾಳನ್ನು ಮಂಗಳವಾರ ಕೇರಳ ಪೊಲೀಸರು ಬಂಧಿಸಿದ್ದಾರೆ.
ಫೇಸ್ಬುಕ್ ಪೋಸ್ಟ್‌ನಲ್ಲಿ ಅಯ್ಯಪ್ಪ ಭಕ್ತರ ಭಾವನೆಗಳಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿದ್ದ ರೆಹಾನಾಳನ್ನು, ಪದನಾಮತಿಟ್ಟ ಪೊಲೀಸರು ಕೊಚ್ಚಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಉದ್ವಿಗ್ನತೆ ಉಂಟಾಗಿದ್ದ ಸಂದರ್ಭದಲ್ಲಿ, ಅಯ್ಯಪ್ಪ ಭಕ್ತಳಂತೆ ಬಟ್ಟೆ ಧರಿಸಿ, ರುದ್ರಾಕ್ಷಿ ಮಾಲೆ ಹಾಕಿಕೊಂಡಿರುವ ಫೋಟೋವನ್ನು ರೆಹಾನಾ ಕಳೆದ ತಿಂಗಳು ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಳು.
ಇದನ್ನೂ ಓದಿ: ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾ ಇನ್ನೊಂದು ರೂಪವಿದು

ಮೊದಲೇ ಸುಪ್ರೀಂ ಕೋರ್ಟ್ ತೀರ್ಪಿನಿಂದ ರೊಚ್ಚಿಗೆದ್ದಿದ್ದ ಅಯ್ಯಪ್ಪ ಭಕ್ತರನ್ನು ರೆಹಾನಾಳ ಪೋಸ್ಟ್ ಹಾಗೂ ವರ್ತನೆ ಇನ್ನಷ್ಟು ಕೆರಳಿಸಿತ್ತು. ಆ ಬಳಿಕ ಶಬರಿಮಲೆ ಸಂರಕ್ಷಣಾ ಸಮಿತಿಯ ದೂರಿನ ಆಧಾರದಲ್ಲಿ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣವನ್ನು ದಾಖಲಿಸಿದ್ದರು.

ಮಹಿಳೆಯರ ವಸ್ತ್ರಧಾರಣೆಯ ಬಗ್ಗೆ ಮುಸ್ಲಿಂ ಧರ್ಮಗುರುವೊಬ್ಬರ ನೀಡಿದ್ದ ಆಕ್ಷೇಪಕಾರಿ ಹೇಳಿಕೆಯನ್ನು ಪ್ರತಿಭಟಿಸಿ, ತನ್ನ ಬೆತ್ತಲೆ ಎದೆ ಮೇಲೆ ಕ್ಲಲಂಗಡಿ ಹಣ್ಣನ್ನಿಟ್ಟಿರುವ ಫೋಟೋವನ್ನು ಫೇಸ್ಬುಕ್‌ನಲ್ಲಿ ರೆಹಾನಾ ಫಾತಿಮಾ ಈ ಹಿಂದೆ ಹಾಕಿಕೊಂಡಿದ್ದಳು.
ಇದನ್ನೂ ಓದಿ: ಶಬರಿಮಲೆ ಪ್ರವೇಶಕ್ಕೆ ತೆರಳಿದ್ದ ಹಾಟ್ ಹಾಟ್ ಬೆಡಗಿ ಫೋಟೋ
ಬಲಪಂಥೀಯ ಗುಂಪುಗಳ ನೈತಿಕ ಪೊಲೀಸ್‌ಗಿರಿಯ ವಿರುದ್ಧವೂ ಬೀದಿಗಿಳಿದಿದ್ದ, ರೆಹಾನಾ ‘ಕಿಸ್ಸ್ ಆಫ್ ಲವ್‘ ಮುಂತಾದ ಪ್ರತಿಭಟನೆಗಳಲ್ಲಿ ಮುಂಚೂಣಿಯಲ್ಲಿದ್ದು ಸುದ್ದಿಯಾಗಿದ್ದಳು.
