ಹುಡುಗೀರು ಕಲ್ಲಂಗಡಿ ಹಣ್ಣಿನಂತೆ ತಮ್ಮ ಎದೆ ಪ್ರದರ್ಶಿಸ್ತಾರೆ ಎಂದ ಪ್ರಾಧ್ಯಾಪಕ; ಯುವತಿಯರಿಂದ 'ಟಾಪ್ ಲೆಸ್' ಪ್ರತಿಭಟನೆ

news | Tuesday, March 20th, 2018
Suvarna Web Desk
Highlights

ಹುಡುಗಿಯರು ಕಲ್ಲಂಗಡಿ ಹಣ್ಣಿನಂತೆ ತಮ್ಮ ಎದೆಯನ್ನು ಪ್ರದರ್ಶಿಸುತ್ತಾರೆ ಎಂದ ಪ್ರೊಫೆಸರ್; ವಿದ್ಯಾರ್ಥಿನಿಯರಿಂದ ‘ವಾಟರ್ ಮೆಲನ್ ಮಾರ್ಚ್’,  ಟಾಪ್ ಲೆಸ್ ಫೋಟೋ ಹಾಕಿ  ಪ್ರತಿಭಟನೆ

ಬೆಂಗಳೂರು: ಕೇರಳದ ಪ್ರಾಧ್ಯಪಕನೊಬ್ಬ,ಇಂದಿನ ಹುಡುಗಿಯರು ಸರಿಯಾಗಿ ವಸ್ತ್ರ ಧರಿಸಲ್ಲ, ತುಂಡರಿಸಿದ ಕಲ್ಲಂಗಡಿ ಹಣ್ಣನ್ನು ಪ್ರದರ್ಶನಕ್ಕಿಟ್ಟ ತರಹ ತಮ್ಮ ಎದೆಯನ್ನು ಪ್ರದರ್ಶಿಸುತ್ತಾರೆ, ಎಂಬ ಹೇಳಿಕೆ ವರದಿಯಾದ ಬೆನ್ನಲ್ಲೇ ಕೇರಳಾದ್ಯಂತ ಪ್ರತಿಭಟನೆಗಳು ಆರಂಭವಾಗಿದೆ.

ಫಾರೂಕ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜೌಹರ್ ಮುನವ್ವಿರ್ ಎಂಬಾತ ಮಾಡಿದ ಭಾಷಣದ ವಿಡಿಯೋ ಕ್ಲಿಪ್ ವೈರಲ್ ಆಗಿತ್ತು.

ಈ ಹೇಳಿಕೆಯಿಂದ ರೊಚ್ಚಿಗೆದ್ದಿರುವ ವಿದ್ಯಾರ್ಥಿನಿಯರು ಕಾಲೇಜಿಗೆ ‘ವಾಟರ್ ಮೆಲನ್ ಮಾರ್ಚ್’ ಮೂಲಕ ಪ್ರತಿಭಟಿಸಿದ್ದಾರೆ.  ಕೆಲ ವಿದ್ಯಾರ್ಥಿನಿಯರು ಕಲ್ಲಂಗಡಿ ಹಣ್ಣನ್ನು ವಿತರಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಆದರೆ ಇನ್ನೂ ಕೆಲ ಯುವತಿಯರು, ತಮ್ಮ ಟಾಪ್ ಲೆಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಪ್ರತಿಭಟಿಸಿದ್ದಾರೆಂದು ವರದಿಯಾಗಿದೆ. ಆದರೆ ಫೇಸ್ಬುಕ್ ಆ ಫೋಟೋಗಳನ್ನು ತೆಗೆದು ಹಾಕಿದೆ ಎಂದು ಹೇಳಲಾಗಿದೆ.

Comments 0
Add Comment