ರೆಡ್ ಮಿ ಮೊಬೈಲ್ ದಿಢೀರ್ ಸ್ಫೋಟ

Redmi Phone explode in Gadag
Highlights

ಮನೆಯಲ್ಲಿಟ್ಟಿದ್ದ ಶಿಯೋಮಿ ರೆಡ್‌ಮಿ 4ಎ ಸೀರಿಸ್ ಮೊಬೈಲ್ ಸ್ಫೋಟಗೊಂಡು ಸುಟ್ಟು ಕರಕಲಾದ ಘಟನೆ ಶನಿವಾರ ಗದಗ ಜಿಲ್ಲೆಯ ರೋಣ ತಾಲೂಕಿನ ಯರೆಬೇಲೆರಿ ಗ್ರಾಮದಲ್ಲಿ ನಡೆದಿದೆ. 
 

ಗದಗ: ಮನೆಯಲ್ಲಿಟ್ಟಿದ್ದ ಶಿಯೋಮಿ ರೆಡ್‌ಮಿ 4ಎ ಸೀರಿಸ್ ಮೊಬೈಲ್ ಸ್ಫೋಟಗೊಂಡು ಸುಟ್ಟು ಕರಕಲಾದ ಘಟನೆ ಶನಿವಾರ ಗದಗ ಜಿಲ್ಲೆಯ ರೋಣ ತಾಲೂಕಿನ ಯರೆಬೇಲೆರಿ ಗ್ರಾಮದಲ್ಲಿ ನಡೆದಿದೆ. 

ಗ್ರಾಮದ ವೀರೇಶ ಹಿರೇಮಠ ಎಂಬವರು ನಗರದ ಮೊಬೈಲ್ ಅಂಗಡಿಯೊಂದರಲ್ಲಿ ಶಿಯೋಮಿ ರೆಡ್‌ಮಿ ೪ಎ ಸೀರಿಸ್ ಮೊಬೈಲ್ ಖರೀದಿಸಿದ್ದರು. ಮನೆಯ ಟೇಬಲ್  ಮೇಲಿಟ್ಟಿದ್ದಾಗ ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟವಾಗಿದೆ.

ಮೊಬೈಲ್ ಬ್ಯಾಟರಿ, ಅದರ ಒಳಭಾಗ, ಸ್ಪೀಕರ್ ಎಲ್ಲವೂ ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಜೀವಾಪಾಯ ಸಂಭವಿಸಿಲ್ಲ. ಈ ಘಟನೆಯಿಂದ ಕುಟುಂಬದವರು ಬೆಚ್ಚಿ ಬಿದ್ದಿದ್ದಾರೆ. 

loader