ಚುನಾವಣಾ ಕಣದಲ್ಲಿ ಎಐಎಡಿಎಂಕೆ ಪಳಿನಿಸ್ವಾಮಿ ಬಣದಿಂದ ಇ. ಮಧುಸೂದನ್, ಶಶಿಕಲಾ ಬಣದಿಂದ ಟಿಟಿವಿ ದಿನಕರನ್  ಹಾಗೂ ಡಿಎಂಕೆಯಿಂದ  ಎಂ. ಗಣೇಶ್ ಸ್ಪರ್ಧಿಸಿದ್ದಾರೆ.

ಚೆನ್ನೈ(ಡಿ.21):ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ನಿಧನದಿಂದ ತೆರವಾಗಿದ್ದ ಆರ್.ಕೆ. ನಗರ ವಿಧಾನಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಶೇ.77 ದಾಖಲೆ ಮತದಾನವಾಗಿದೆ.

2011ರಲ್ಲಿ ಹೊರತುಪಡಿಸಿದರೆ ಈ ಅವಧಿಯಲ್ಲಿಯೇ ಅತೀ ಹೆಚ್ಚು ಮತದಾನವಾಗಿದೆ. 2016ರಲ್ಲಿ ಶೇ.67.6 ಮತದಾನವಾಗಿತ್ತು. ಚುನಾವಣಾ ಕಣದಲ್ಲಿ ಎಐಎಡಿಎಂಕೆ ಪಳಿನಿಸ್ವಾಮಿ ಬಣದಿಂದ ಇ. ಮಧುಸೂದನ್, ಶಶಿಕಲಾ ಬಣದಿಂದ ಟಿಟಿವಿ ದಿನಕರನ್ ಹಾಗೂ ಡಿಎಂಕೆಯಿಂದ ಎಂ. ಗಣೇಶ್ ಸ್ಪರ್ಧಿಸಿದ್ದಾರೆ.

ಕ್ಷೇತ್ರದಲ್ಲಿ ತಮಿಳು ಸಮುದಾಯದವರಿಗಿಂತ ತೆಲುಗು ಭಾಷಿಕರು ನಿರ್ಣಾಯಕವಾಗಿದ್ದಾರೆ. ಮತ ಎಣಿಕೆ ಡಿ.24 ರಂದು ನಡೆಯಲಿದ್ದು, ಅಂದು ಮಧ್ಯಾಹ್ನವೇ ಫಲಿತಾಂಶ ನಿರ್ಧಾರವಾಗಲಿದೆ.