ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಅಮಾನತುಗೊಂಡಿದ್ದ ಜೆಡಿಎಸ್​ ಶಾಸಕರು ಈಗ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ. ಇಂದು ಸಿಎಂ ಜೊತೆ ನಡೆಯುವ ಸಭೆಯಲ್ಲಿ ನಿರ್ಧಾರ ಅಂತಿಮವಾಗಲಿದ್ದು, ಎನ್​ಸಿಪಿ ಜೊತೆಗಿನ ಮಾತುಕತೆ ಮುರಿದು ಬಿದ್ದ ಕಾರಣ ಕಾಂಗ್ರೆಸ್​ ಸೇರುವ ಬೆಳವಣಿಗೆ ಚುರುಕು ಪಡೆದಿದೆ.

ಬೆಂಗಳೂರು(ಜ.28): ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಅಮಾನತುಗೊಂಡಿದ್ದ ಜೆಡಿಎಸ್​ ಶಾಸಕರು ಈಗ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ. ಇಂದು ಸಿಎಂ ಜೊತೆ ನಡೆಯುವ ಸಭೆಯಲ್ಲಿ ನಿರ್ಧಾರ ಅಂತಿಮವಾಗಲಿದ್ದು, ಎನ್​ಸಿಪಿ ಜೊತೆಗಿನ ಮಾತುಕತೆ ಮುರಿದು ಬಿದ್ದ ಕಾರಣ ಕಾಂಗ್ರೆಸ್​ ಸೇರುವ ಬೆಳವಣಿಗೆ ಚುರುಕು ಪಡೆದಿದೆ.

ರಾಜ್ಯ ರಾಜಕಾರಣದಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಅಮಾನತುಗೊಂಡಿರುವ ಜೆಡಿಎಸ್ ಶಾಸಕರು ಕಾಂಗ್ರೆಸ್​ ಸೇರಲು ಕಾತುರರಾಗಿದ್ದಾರೆ. ಇಂದು ಸಿಎಂ ನೇತೃತ್ವದಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ 7 ಶಾಸಕರು ಕೈ ಹಿಡಿಯುವ ನಿರ್ಧಾರ ಅಂತಿಮಗೊಳ್ಳಲಿದೆ. ಕಾಂಗ್ರೆಸ್​ ಸೇರುವ ಬಗ್ಗೆ ನಿಮ್ಮ ನಿರ್ಧಾರ ಸ್ಪಷ್ಟಪಡಿಸಿ ಎಂದು 7 ಜನ ಶಾಸಕರಿಗೆ ಸಿಎಂ ಸಿದ್ಧರಾಮಯ್ಯ ಸೂಚಿಸಿದ್ದು, ಕಾಂಗ್ರೆಸ್​ ಸೇರ್ಪಡೆಯಾದ್ರೆ ಟಿಕೆಟ್​ ನೀಡುವ ಭರವಸೆಯನ್ನೂ ನೀಡಿದ್ದಾರೆ. ಆದರೆ ಅದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿ ಸ್ಪಷ್ಟಪಡಿಸಿಕೊಳ್ಳುವಂತೆಯೂ ಶಾಸಕರಿಗೆ ಸಿಎಂ ಸಲಹೆ ಮಾಡಿದ್ದಾರೆ.

ಇನ್ನು ವಿಧಾನ ಪರಿಷತ್​ ಸದಸ್ಯ ಪುಟ್ಟಣ್ಣ ಸೇರಿ ಏಳೂ ಜನರಿಗೆ ಟಿಕೆಟ್​ ಕೊಡಲು ಕಾಂಗ್ರೆಸ್​ ಮುಂದೆ ಪಟ್ಟು ಹಿಡಿದಿದ್ದಾರೆ. ಆದ್ರೆ ಕಾಂಗ್ರೆಸ್​ ಕಡೆಯಿಂದ ಶಾಸಕರಾದ ಜಮೀರ್​ ಅಹಮದ್, ಬಾಲಕೃಷ್ಣ, ಭೀಮಾನಾಯ್ಕ್​, ರಮೇಶ್​ ಬಂಡಿಸಿದ್ದೇಗೌಡ, ಅವರಿಗೆ ಟಿಕೆಟ್​ ನೀಡುವ ಬಗ್ಗೆ ಒಪ್ಪಿಗೆ ಇದ್ದು, ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ ಮತ್ತು ಪುಟ್ಟಣ್ಣ ಅವರಿಗೆ ಟಿಕೆಟ್​ ನೀಡುವ ಬಗ್ಗೆ ಇನ್ನೂ ಲೆಕ್ಕಾಚಾರ ನಡೆದಿದೆ.

ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಕಾಲ ಇದ್ದರೂ ಕಾಂಗ್ರೆಸ್​ನಲ್ಲಿ ಟಿಕೆಟ್​ ಖಚಿತಪಡಿಸಿಕೊಳ್ಳಲು ಈಗ ರೆಬೆಲ್​ ಶಾಸಕರು ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಅದಲ್ಲದೇ ಕಾಂಗ್ರೆಸ್​ ಸೇರಲು ಕಾತುರತೆ ವ್ಯಕ್ತಪಡಿಸಲು ಎನ್​ಸಿಪಿ ಜೊತೆಗಿನ ಮಾತುಕತೆ ಮುರಿದು ಬಿದ್ದಿದ್ದೇ ಕಾರಣ. ಹೀಗಾಗಿ ತಮ್ಮ ಬೆಂಬಲಿಗರ ವಿಶ್ವಾಸ ಉಳಿಸಿಕೊಳ್ಳಲು, ಕ್ಷೇತ್ರ ಉಳಿಸಿಕೊಳ್ಳಲು ಕಾಂಗ್ರೆಸ್​ ನಲ್ಲಿ ಭವಿಷ್ಯ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಕಿರಣ್​ ಹನಿಯಡ್ಕ, ಪೊಲಿಟಿಕಲ್​ ಬ್ಯೂರೋ, ಸುವರ್ಣ ನ್ಯೂಸ್​.