ಬೆಂಗಳೂರು(ಜು. 14) ರಾಜೀನಾಮೆ ಕೊಟ್ಟಿದ್ದ ಎಂಟಿಬಿ ನಾಗರಾಜ್ ಮುಂಬೈ ವಿಮಾನ ಏರಿದ್ದು ಹೊಟೆಲ್ ನಲ್ಲಿ ಅತೃಪ್ತರ ಪಡೆ ಸೇರಿಕೊಂಡಿದ್ದಾರೆ. ಹಾಗಾದರೆ ಎಂಟಿಬಿ ನಾಗರಾಜ್ ಕೊನೆಗೂ ಕೈಕೊಡಲು ಕಾರಣವೇನು?

ಪುತ್ರನ ರಾಜಕಾರಣದ ಭವಿಷ್ಯ: ಲೋಕಸಭಾ ಚುನಾವಣೆ ಫಲಿತಾಂಶ ಸಹಜವಾಗಿಯೇ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ನಡುಕ ತಂದಿದ್ದು. ಸುರಕ್ಷಿತ ಪ್ರದೇಶವನ್ನು ಅವರುಸುತ್ತಿದ್ದರು. ತಮ್ಮ ಪುತ್ರನಿಗೆ ಉತ್ತಮ ರಾಜಕೀಯ ಭವಿಷ್ಯ ರೂಪಿಸಲು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇಲಾಖೆಯಲ್ಲಿ ಹಸ್ತಕ್ಷೇಪ: ಲೋಕೋಪಯೋಗಿ ಸಚಿವ ಎಚ್‌.ಡಿ ರೇವಣ್ಣ ವಿರುದ್ಧ  ಕಿಡಿಕಾರಿದ್ದ  ಎಂಟಿಬಿ  ತಮ್ಮ ಖಾತೆಯಲ್ಲಿ ಬೇರೆಯವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದಿದ್ದರು.  

ಮೂಲ ಕಾಂಗ್ರೆಸ್ ಕಡೆಗಣನೆ: ಸಮ್ಮಿಶ್ರ ಸರಕಾರಲ್ಲಿ ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಮಾಡಲಾಗುತ್ತಿದೆ ಎಂಬ  ಮಾತುಗಳು ಕೇಳಿಬಂದಿದ್ದವು. ಹಲವು ಸಂದರ್ಭದಲ್ಲಿ ಇದಕ್ಕೆ ಪೂರಕವಾದ ಬೆಳವಣಿಗೆಗಳು ನಡೆದಿದ್ದವು.