ಐಸಿಯುನಲ್ಲಿರುವ ಜಯಲಲಿತಾಗೆ ನೀಡುತ್ತಿರುವ ಆಹಾರದಲ್ಲಿ ಏರುಪೇರು ಆಗಿತ್ತು. ಇದರ ಪರಿಣಾಮವಾಗಿ ಪ್ರೋಟಿನ್​ನಲ್ಲಿ ಪೊಟ್ಯಾಷಿಯಂ ಹೆಚ್ಚಾಗಿ ರಕ್ತ ಸಂಚಾರ ಏರುಪೇರಾಯಿತು. ಹೀಗಾಗಿ ನಿನ್ನೆ ಸಂಜೆ ಜಯಲಲಿತಾಗೆ ಹೃದಯಾಘಾತವಾಗಿದೆ.

ಚೆನ್ನೈ(ಡಿ.05): ಐಸಿಯುನಲ್ಲಿರುವ ಜಯಲಲಿತಾಗೆ ನೀಡುತ್ತಿರುವ ಆಹಾರದಲ್ಲಿ ಏರುಪೇರು ಆಗಿತ್ತು. ಇದರ ಪರಿಣಾಮವಾಗಿ ಪ್ರೋಟಿನ್​ನಲ್ಲಿ ಪೊಟ್ಯಾಷಿಯಂ ಹೆಚ್ಚಾಗಿ ರಕ್ತ ಸಂಚಾರ ಏರುಪೇರಾಯಿತು. ಹೀಗಾಗಿ ನಿನ್ನೆ ಸಂಜೆ ಜಯಲಲಿತಾಗೆ ಹೃದಯಾಘಾತವಾಗಿದೆ.

ಜಯಲಲಿತಾರ ಅನಾರೋಗ್ಯದಿಂದ ತಕ್ಷಣವೇಎಚ್ಚೆತ್ತ ವೈದ್ಯರು ಕೂಡಲೇ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಇಂದು ಬೆಳಗ್ಗೆ ಆಂಜಿಯೋಗ್ರಾಮ್​ ಪರೀಕ್ಷೆ ಮಾಡಿ ಸಣ್ಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಇದೀಗ ತೀವ್ರ ನಿಗಾ ಘಟಕದಲ್ಲಿ ಜಯಲಲಿತಾಗೆ ಚಿಕಿತ್ಸೆ ನೀಡಲಾಗುತ್ತಿದೆ.