ಚಂದನವನದ ಕುಚಿಕು ಗೆಳೆಯರು ಅಂದರೆ ನೆನಪಾಗುವುದು ಅಂಬಿ-ವಿಷ್ಣುದಾದ ಜೋಡಿ. ಈ ದಿಗ್ಗಜರ ಸ್ನೇಹವನ್ನು ಮರುಕಳಿಸಿದ ಜೋಡಿ ಚಾಲೆಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್. ಆದರೆ ಇವರಿಬ್ಬರ ಸ್ನೇಹಕ್ಕೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಕುಚಿಕು ಗೆಳೆಯರಾಗಿದ್ದವರ ಮಧ್ಯೆ ಕಿಚ್ಚು ಹೊತ್ತುಕೊಂಡಿದೆ.

ಬೆಂಗಳೂರು(ಮಾ.06): ಚಂದನವನದ ಕುಚಿಕು ಗೆಳೆಯರು ಅಂದರೆ ನೆನಪಾಗುವುದು ಅಂಬಿ-ವಿಷ್ಣುದಾದ ಜೋಡಿ. ಈ ದಿಗ್ಗಜರ ಸ್ನೇಹವನ್ನು ಮರುಕಳಿಸಿದ ಜೋಡಿ ಚಾಲೆಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್. ಆದರೆ ಇವರಿಬ್ಬರ ಸ್ನೇಹಕ್ಕೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಕುಚಿಕು ಗೆಳೆಯರಾಗಿದ್ದವರ ಮಧ್ಯೆ ಕಿಚ್ಚು ಹೊತ್ತುಕೊಂಡಿದೆ.

ಮುರಿದು ಬಿತ್ತು ಸ್ನೇಹ?: ಸ್ಯಾಂಡಲ್​​ವುಡ್ ನ ಕುಚಿಕುಗಳ ನಡುವೆ ಕಂದಕ ಸೃಷ್ಟಿಸಿದ ಟ್ವೀಟ್!

ಸ್ಯಾಂಡಲ್​​ವುಡ್'ನಲ್ಲಿ ಆರಡಿ ಹೀರೋಗಳ ಹವಾ ಶುರುಮಾಡಿದವ್ರು ಈ ಇಬ್ಬರು ನಾಯಕ ನಟರೇ. ಇವರಿಬ್ಬರಿಗೂ ಸ್ಪರ್ಶ ಮತ್ತು ಮೆಜೆಸ್ಟಿಕ್ ಚಿತ್ರಗಳ ಮೂಲಕ ಲಕ್ಕಿ ಹೀರೊಯಿನ್ ಆದವ್ರು ರೇಖಾ... ಸುಮಾರು 15 ರಿಂದ 17 ವರ್ಷಗಳ ನಂಟು ಈ ನಲ್ಲ ಮತ್ತು ಅಯ್ಯನದು. ಉಭಯ ನಾಯಕರು ತಮ್ಮ ಸಿನಿ ಬದುಕಿನ ಜೊತೆ ಜೊತೆಗೆ, ಸ್ನೇಹ ಸಾಗರವನ್ನು ವಿಶಾಲಗೊಳಿಸಿದ್ದರು. ಆದ್ರೆ ಖಾಸಗಿ ವಾಹಿನಿಯಲ್ಲಿ ಸುದೀಪ್ ಕೊಟ್ಟ ಒಂದು ಇಂಟರ್ವ್ಯೂ ಇವರಿಬ್ಬರ ಸ್ನೇಹಕ್ಕೆ ಸಾಗರದಲ್ಲಿ ಸುನಾಮಿ ಎಬ್ಬಿಸಿದೆ.

Scroll to load tweet…

ಸುದೀಪ್ ಹೇಳಿಕೆಗೆ ಸುಂಟರಗಾಳಿಗೆ ಮುನಿಸು

ಹೌದು, 2002ರಲ್ಲಿ ತೆರೆಗೆ ಬಂದ ಮೆಜೆಸ್ಟಿಕ್ ಚಿತ್ರವೇ ಈಗ ಕುಚಿಕು ಗೆಳೆಯರ ಸ್ನೇಹಕ್ಕೆ ಕಂದಕವಾಗಿದೆ. ಸುಮಾರು 5 ವರ್ಷಗಳ ಹಿಂದೆ ಖಾಸಗಿ ವಾಹಿನಿಯಲ್ಲಿ ದರ್ಶನ್ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದ ಸುದೀಪ್. ದರ್ಶನ್'ಗೆ ಮೆಜೆಸ್ಟಿಕ್ ಚಿತ್ರಕ್ಕೆ ಅವಕಾಶ ಕೊಡಿಸಿದ್ದು ನಾನೇ. ಆ ಚಿತ್ರವನ್ನ ನಾನೇ ಮಾಡಬೇಕಿತ್ತು. ಆದರೆ ನನಗೆ ಶೂಟಿಂಗ್'ಗೆ ಡೇಟ್ ಇಲ್ಲ ಎನ್ನುವ ಕಾರಣಕ್ಕೆ ಆ ಅವಕಾಶವನ್ನ ದರ್ಶನ್'ಗೆ ಕೊಡಿಸಿದೆ ಅಂತಾ ಸುದೀಪ್ ಹೇಳಿಕೆ ನೀಡಿದ್ದರು.

ನನಗೆ ಮೆಜೆಸ್ಟಿಕ್ ಸಿಗಲು ಸುದೀಪ್ ಸೂಚಿಸಿದ್ದರಂತೆ: ಈ ವಿಷಯದ ಬಗ್ಗೆ ನನಗೆ ಕ್ಲಾರಿಟಿ ನೀಡಲಿ

ಕೆಲ ವರ್ಷಗಳಿಂದ ಉಭಯ ನಾಯಕರ ನಡುವೆ ಮನಸ್ತಾಪವಿದೆ ಅಂತಾ ಕೇಳಿ ಬರ್ತಿದ್ದ ಗಾಳಿ ಸುದ್ದಿಗೆ, ಸ್ವತಃ ದರ್ಶನ್ ತೆರೆ ಎಳೆದು ಇತೀಶ್ರೀ ಹಾಡಿದ್ದಾರೆ. ಸುದೀಪ್ ನೀಡಿರುವ ಹೇಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿದೆ. ನನಗೆ ಮೆಜೆಸ್ಟಿಕ್ ಸಿಗಲು ಕಾರಣ ರಾಮಮೂರ್ತಿ, ಪಿಎನ್ ಸತ್ಯ ಮತ್ತು ರಮೇಶ್. ಆದರೆ ಸುದೀಪ್ ತಾವೇ ಅವಕಾಶ ಕೊಡಿಸಿದ್ದಾಗಿ ಹೇಳಿರುವುದಕ್ಕೆ ನನಗೆ ಕ್ಲಾರಿಟಿ ಬೇಕು. ಇನ್ಮುಂದೆ ನಾವು ಸ್ನೇಹಿತರಲ್ಲ. ಇಬ್ಬರು ಕನ್ನಡ ಇಂಡಸ್ಟ್ರಿಗಾಗಿ ದುಡಿಯುತ್ತಿದ್ದೇವೆ ಅಷ್ಟೇ ಅಂದಿದ್ದಾರೆ.

ಒಟ್ನಲ್ಲಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಸ್ನೇಹ ಸಮರಕ್ಕೆ ದರ್ಶನ್ ಬ್ರೇಕ್​ ಹಾಕಿದ್ದಾರೆ. ಆದ್ರೆ ಈ ಬಗ್ಗೆ ಕಿಚ್ಚ ಸುದೀಪ್ ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದು ಕುತೂಹಲ ಮೂಡಿಸಿದೆ.