Asianet Suvarna News Asianet Suvarna News

ವಿಜಯಶಂಕರ್ ಕಮಲ ಪಕ್ಷ ತೊರೆಯಲು ಏನು ಕಾರಣ?

ಮಾಜಿ ಸಚಿವ ಹಾಗೂ ಹಾಲಿ ಪಕ್ಷದ ರೈತ ಮೋರ್ಚಾ ರಾಜ್ಯಾಧ್ಯಕ್ಷ ಸಿ.ಎಚ್.ವಿಜಯಶಂಕರ್ ಬಿಜೆಪಿ ತೊರೆಯುವ ನಿರ್ಧಾರಕ್ಕೆ ಬಂದಿರುವುದಕ್ಕೆ ಮುಖ್ಯ ಕಾರಣ ಮೈಸೂರಿನ ಸಂಸದ ಪ್ರತಾಪ್ ಸಿಂಹ ಎಂಬ ಮಾತು ಪಕ್ಷದ ಆಂತರಿಕ ವಲಯದಲ್ಲಿ ಬಲವಾಗಿ ಕೇಳಿಬಂದಿದೆ.

Reason Behind Vijayashankar Quitting BJP

ಬೆಂಗಳೂರು: ಮಾಜಿ ಸಚಿವ ಹಾಗೂ ಹಾಲಿ ಪಕ್ಷದ ರೈತ ಮೋರ್ಚಾ ರಾಜ್ಯಾಧ್ಯಕ್ಷ ಸಿ.ಎಚ್.ವಿಜಯಶಂಕರ್ ಬಿಜೆಪಿ ತೊರೆಯುವ ನಿರ್ಧಾರಕ್ಕೆ ಬಂದಿರುವುದಕ್ಕೆ ಮುಖ್ಯ ಕಾರಣ ಮೈಸೂರಿನ ಸಂಸದ ಪ್ರತಾಪ್ ಸಿಂಹ ಎಂಬ ಮಾತು ಪಕ್ಷದ ಆಂತರಿಕ ವಲಯದಲ್ಲಿ ಬಲವಾಗಿ ಕೇಳಿಬಂದಿದೆ.

ಸ್ಥಳೀಯ ತೀರ್ಮಾನಗಳಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಅಂಶವನ್ನು ವಿಜಯಶಂಕರ್ ಹಲವು ತಿಂಗಳುಗಳಿಂದ ನಾಯಕರ ಗಮನಕ್ಕೆ ತರುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ವಿಜಯಶಂಕರ್ ಸದ್ಯದ ಪರಿಸ್ಥಿತಿಯಲ್ಲಿ ಸ್ಥಳೀಯವಾಗಿ ತೀವ್ರ ಕಡೆಗಣಿಸಲ್ಪಟ್ಟಿದ್ದರು. ಹಿಂದೆಲ್ಲ ಮೈಸೂರು ಬಿಜೆಪಿ ಎಂದ ಕೂಡಲೇ ವಿಜಯಶಂಕರ್ ಹೆಸರು ಕೇಳಿಬರುತ್ತಿತ್ತು. ಈಗ ಅವರ ಹೆಸರೇ ಇಲ್ಲದಂತಾಗಿದೆ.

ಮುಂದೇನು ಎಂಬ ವಿಜಯಶಂಕರ್ ಪ್ರಶ್ನೆಗೆ ರಾಜ್ಯ ನಾಯಕ ರಲ್ಲಿ ಉತ್ತರವಿರಲಿಲ್ಲ. ಅಂದರೆ, ಬಿಜೆಪಿಯಿಂದ ಮುಂದಿನ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ಭರವಸೆಯೂ ಇಲ್ಲ. ಲೋಕಸಭಾ ಕ್ಷೇತ್ರ ಈಗಾಗಲೇ ಕೈಬಿಟ್ಟು ಹೋಗಿದೆ. ಹೀಗಿರುವಾಗ ಬಿಜೆಪಿಯಲ್ಲಿ ಮುಂದುವರೆಯು ವುದರಲ್ಲಿ ಯಾವುದೇ ಉದ್ದೇಶ ಕಾಣುತ್ತಿಲ್ಲ ಎಂದು ಆಪ್ತರು ವಿವರಿಸಿದ್ದಾರೆ. ವಿಜಯಶಂಕರ್ ಯಡಿಯೂರಪ್ಪ ಅವರ ಆಪ್ತರು. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಗೆ ಟಿಕೆಟ್ ತಪ್ಪಿಸಿದ್ದಕ್ಕೆ ಬಹಿರಂಗವಾಗಿಯೇ ಕಣ್ಣೀರಿಟ್ಟಿದ್ದ ವಿಜಯಶಂಕರ್ ಅವರನ್ನು ಸಮಾಧಾನಪಡಿಸುವುದಕ್ಕಾಗಿ ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ರೈತ ಮೋರ್ಚಾದ ಅಧ್ಯಕ್ಷರನ್ನಾಗಿ ನೇಮಿಸಿದರು.

ಆದರೆ, ಅದರಾಚೆಗೆ ಮೈಸೂರಿನಲ್ಲಿ ವಿಜಯಶಂಕರ್ ಅವರಿಗೆ ಶಕ್ತಿ ತುಂಬಲು ಯಡಿಯೂರಪ್ಪ ಅವರಿಂದಲೂ ಆಗಲಿಲ್ಲ. ಸಿಂಹ ಅವರೊಬ್ಬರೇ ಅಲ್ಲ, ಪಕ್ಷದ ಇತರ ಮುಖಂಡರೂ ವಿಜಯಶಂಕರ್ ಅವರನ್ನು ನಿರ್ಲಕ್ಷಿಸಿದರು ಎನ್ನಲಾಗಿದೆ.

 

Follow Us:
Download App:
  • android
  • ios