ಸಿಎಂ ಕಳೆದ 5 ಬಾರಿ ಉಡುಪಿಗೆ ಬಂದಾಗಲೂ ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ. ಉಡುಪಿಯ ಕೃಷ್ಣಮಠದಲ್ಲಿ ಒಂದೂವರೆ ದಶಕದ ಹಿಂದೆ ನಡೆದ ಕನಕಗೋಪುರ ವಿವಾದ ಬಳಿಕ ಸಿಎಂ ಕೃಷ್ಣ ಮಠಕ್ಕೆ ಭೇಟಿ ನೀಡಿರಲಿಲ್ಲ. ಉದ್ಯಮಿ ಬಿ.ಆರ್.ಶೆಟ್ಟಿ ಸಹಭಾಗಿತ್ವದಲ್ಲಿ ಹೆರಿಗೆ ಆಸ್ಪತ್ರೆಯೊಂದು ನಿರ್ಮಾಣವಾಗಿದ್ದು, ಇಂದು ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಲಿದ್ದಾರೆ.
ಉಡುಪಿ: ಸಿಎಂ ಕಳೆದ 5 ಬಾರಿ ಉಡುಪಿಗೆ ಬಂದಾಗಲೂ ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ. ಉಡುಪಿಯ ಕೃಷ್ಣಮಠದಲ್ಲಿ ಒಂದೂವರೆ ದಶಕದ ಹಿಂದೆ ನಡೆದ ಕನಕಗೋಪುರ ವಿವಾದ ಬಳಿಕ ಸಿಎಂ ಕೃಷ್ಣ ಮಠಕ್ಕೆ ಭೇಟಿ ನೀಡಿರಲಿಲ್ಲ. ಉದ್ಯಮಿ ಬಿ.ಆರ್.ಶೆಟ್ಟಿ ಸಹಭಾಗಿತ್ವದಲ್ಲಿ ಹೆರಿಗೆ ಆಸ್ಪತ್ರೆಯೊಂದು ನಿರ್ಮಾಣವಾಗಿದ್ದು, ಇಂದು ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಕೃಷ್ಣಮಠದಿಂದ ಅನತಿ ದೂರದಲ್ಲೇ ನಡೆಯಲಿದೆ. ಹಾಗಾಗಿ ಈ ಬಾರಿಯಾದ್ರೂ ಸಿಎಂ ಕೃಷ್ಣಮಠಕ್ಕೆ ಭೇಟಿ ನೀಡ್ತಾರಾ? ಎಂಬುವುದು ಈಗ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಕನಕನ ಕಿಂಡಿ ಮೇಲಿನ ಗೋಪುರ ಕೆಡವಿರುವ ವಿಚಾರದಲ್ಲಿ ಸಿದ್ದರಾಮಯ್ಯ, ಕುರುಬ ಸಮುದಾಯದ ಪ್ರತಿನಿಧಿಯಾಗಿ ಹೋರಾಟ ಮಾಡಿದ್ದರು. ಅಲ್ಲದೆ ಇದಾದ ಬಳಿಕ ಸಿಎಂ ಕೃಷ್ಣಮಠಕ್ಕೆ ಭೇಟಿ ನೀಡಿರಲಿಲ್ಲ. ಮತ್ತೊಂದು ಇಂಟ್ರೆಸ್ಟಿಂಗ್ ವಿಷ್ಯ ಅಂದ್ರೆ, ಸಿದ್ದರಾಮಯ್ಯನವರು ಚಿಕ್ಕವರಾಗಿದ್ದಾಗ ಮಠಕ್ಕೆ ಭೇಟಿ ನೀಡಿದ್ದಾಗ, ಪ್ರಸಾದವನ್ನು ಎಸೆದು ಅವಮಾನ ಮಾಡಿದ್ದಂತೆ. ಈ ಕಾರಣಕ್ಕೆ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಕಾಲಿಟ್ಟಿಲ್ಲ ಎನ್ನಲಾಗುತ್ತಿದೆ. ಏನೇ ಆದರೂ ಸಿದ್ದರಾಮಯ್ಯನವರನ್ನು ಮಠಕ್ಕೆ ಕರೆಸೋದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸವಾಲಾಗಿದೆ. ಮಠಕ್ಕೆ ಭೇಟಿ ನೀಡದೆ ಪ್ರತಿಷ್ಟೆ ಕಾಯ್ದುಕೊಳ್ಳೋದು ಸಿದ್ದರಾಮಯ್ಯನವರಿಗೂ ಸವಾಲಾಗಿದೆ.
