Asianet Suvarna News Asianet Suvarna News

ವೈರಲ್ ಸುದ್ದಿ ನಿಜನಾ? ಅದಾನಿ ಪತ್ನಿಗೆ ಪ್ರಧಾನಿ ಮೋದಿ ನಮಿಸಿದರೇ?

ಪ್ರಧಾನಿ ಮೋದಿಯವರು ನಡುಬಾಗಿ ನಮಿಸುವುದು ಹೊಸದೇನಲ್ಲ. ಮಹಿಳೆಯರ ವಿಚಾರಕ್ಕೆ ಬಂದರೆ ಪ್ರಧಾನಿ ಮೋದಿ ಗೌರವಸೂಚ್ಯಕವಾಗಿ ವಂದನೆ ಸಲ್ಲಿಸಿರುವ ಘಟನೆಗಳು ಹಲವಾರಿವೆ.

reality check on viral photo of modi bowing to a lady
  • Facebook
  • Twitter
  • Whatsapp

ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯೊಬ್ಬಳಿಗೆ ಶಿರಬಾಗಿ ನಮಸ್ಕರಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದರೆ, ಮೋದಿ ಅವರು ನಮಸ್ಕರಿಸಿದ ಮಹಿಳೆ ಬೇರೆ ಯಾರೂ ಅಲ್ಲ, ಅವರು ಗುಜರಾತ್‌ ಉದ್ಯಮಿ ಗೌತಮ್‌ ಅದಾನಿ ಪತ್ನಿ ಎಂಬ ಸುದ್ದಿಯನ್ನು ಹರಿಬಿಡಲಾಗಿದೆ. ಈ ಫೋಟೋಕ್ಕೆ ವ್ಯಾಪಕ ಟೀಕೆ ಮತ್ತು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಮೋದಿ ಮತ್ತು ಅದಾನಿ ದಶಕಗಳ ಸ್ನೇಹಿತರು. ಮೋದಿ ಸರ್ಕಾರ ಅದಾನಿ ಬೆಂಬಲಕ್ಕೆ ನಿಂತಿದೆ ಎಂಬುದನ್ನು ಬಿಂಬಿಸಲು ಈ ಚಿತ್ರವನ್ನು ಹರಿ ಬಿಡಲಾಗಿದೆ ಎಂಬ ಸಂದೇಶಗಳನ್ನು ಬರೆಯಲಾಗಿದೆ. 2014ರಲ್ಲಿ ತೆಗೆಯಲಾದ ಈ ಫೋಟೋದಲ್ಲಿ ಕರ್ನಾಟಕ ರಾಜ್ಯಪಾಲ ವಜುಭಾಯ್‌ ವಾಲಾ ಅವರನ್ನೂ ಕಾಣಬಹುದಾಗಿದೆ. ಆದರೆ, ಮಹಿಳೆಯ ಮುಖ ಸ್ಪಷ್ಟವಾಗಿ ಕಾಣದಿರುವುದೇ ಇಷ್ಟೆಲ್ಲಾ ಅನುಮಾನಕ್ಕೆ ಕಾರಣವಾಗಿದೆ. ಆದರೆ, ವಾಸ್ತವ ಸಂಗತಿಯೇ ಬೇರೆ. ಮೋದಿ ಅವರು ನಮಿಸಿದ್ದು ಅದಾನಿ ಪತ್ನಿಗಲ್ಲ. ಬದಲಾಗಿ ತುಮಕೂರು ಮೇಯರ್‌ ಗೀತಾ ರುದ್ರೇಶ್‌ ಅವರಿಗಾಗಿತ್ತು. ಮೋದಿ ಅವರು 2014ರಲ್ಲಿ ಫುಡ್‌ ಪಾರ್ಕ್ ಉದ್ಘಾಟಿಸಲು ತುಮಕೂರಿಗೆ ಆಗಮಿಸಿದ್ದಾಗ ಮೇಯರ್‌ ಗೀತಾ ಅವರು ಮೋದಿ ಅವರನ್ನು ಬರಮಾಡಿಕೊಂಡಿದ್ದರು. ಈ ವೇಳೆ ಮೋದಿ ಅವರು ಗೌರವ ಸೂಚಕವಾಗಿ ಮೇಯರ್‌'ಗೆ ನಮಿಸಿದ್ದರು.

ಪ್ರಧಾನಿ ಮೋದಿಯವರು ನಡುಬಾಗಿ ನಮಿಸುವುದು ಹೊಸದೇನಲ್ಲ. ಮಹಿಳೆಯರ ವಿಚಾರಕ್ಕೆ ಬಂದರೆ ಪ್ರಧಾನಿ ಮೋದಿ ಗೌರವಸೂಚ್ಯಕವಾಗಿ ವಂದನೆ ಸಲ್ಲಿಸಿರುವ ಘಟನೆಗಳು ಹಲವಾರಿವೆ.

epaper.kannadaprabha.in

Follow Us:
Download App:
  • android
  • ios