ಜಗತ್ತಿನ ಮೊದಲ ಐಷಾರಾಮಿ ಹಡಗು ಎಂದೇ ಪ್ರಸಿದ್ಧಿ ಪಡೆದು ಪ್ರತಿಯೊಬ್ಬನೂ ತನ್ನೆಡೆ ನೋಡುವಂತೆ ಮಾಡಿದ್ದ 'ಟೈಟಾನಿಕ್' ತನ್ನ ಮೊದಲ ಪ್ರಯಾಣದಲ್ಲೇ ದುರಂತ ಕಂಡಿತ್ತು. ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಿದ್ದ ಈ ದುರಂತ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಬದುಕಿ ಬಂದ ಕೆಲವರು ಸಮುದ್ರಲ್ಲಿ ಹಡಗಿನ ಮಾರ್ಗಕ್ಕೆ ಅಡ್ಡ ಬಂದಿದ್ದ ಹಿಮಬಂಡೆಗಳು ಅಪ್ಪಳಿಸಿ ಈ ಅವಘಡ ಸಂಭವಿಸಿತ್ತು ಎಂದಿದ್ದರು. ಆದರೆ ಇದೀಗ ಟೈಟಾನಿಕ್ ದುರಂತಕ್ಕೆ ಸಂಬಂಧಿಸಿದಂತೆ ಮತ್ತೊಂದು ರಹಸ್ಯ ಬಯಲಾಗಿದೆ.

ನವದೆಹಲಿ(ಜ.02): ಜಗತ್ತಿನ ಮೊದಲ ಐಷಾರಾಮಿ ಹಡಗು ಎಂದೇ ಪ್ರಸಿದ್ಧಿ ಪಡೆದು ಪ್ರತಿಯೊಬ್ಬನೂ ತನ್ನೆಡೆ ನೋಡುವಂತೆ ಮಾಡಿದ್ದ 'ಟೈಟಾನಿಕ್' ತನ್ನ ಮೊದಲ ಪ್ರಯಾಣದಲ್ಲೇ ದುರಂತ ಕಂಡಿತ್ತು. ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಿದ್ದ ಈ ದುರಂತ ಜಗತ್ತನ್ನೇ ಬೆಚ್ಚಿ ಬೀಳಿಸಿತ್ತು. ಬದುಕಿ ಬಂದ ಕೆಲವರು ಸಮುದ್ರಲ್ಲಿ ಹಡಗಿನ ಮಾರ್ಗಕ್ಕೆ ಅಡ್ಡ ಬಂದಿದ್ದ ಹಿಮಬಂಡೆಗಳು ಅಪ್ಪಳಿಸಿ ಈ ಅವಘಡ ಸಂಭವಿಸಿತ್ತು ಎಂದಿದ್ದರು. ಆದರೆ ಇದೀಗ ಟೈಟಾನಿಕ್ ದುರಂತಕ್ಕೆ ಸಂಬಂಧಿಸಿದಂತೆ ಮತ್ತೊಂದು ರಹಸ್ಯ ಬಯಲಾಗಿದೆ.

ಸದ್ಯ ಲಭ್ಯವಾದ ಮಾಹಿತಿ ಅನ್ವಯ ಕೇವಲ ಹಿಮಬಂಡೆಗಳು ಹಡಗಿಗೆ ಅಪ್ಪಳಿಸಿದ್ದರ ಪರಿಣಾಮ ಈ ದುರಂತವಾಗಿದ್ದಲ್ಲ, ಬದಲಾಗಿ ಹಡಗಿನ ಬಾಯ್ಲರ್ ವಿಭಾಗದಲ್ಲಿ ಬೆಂಕಿ ತಗುಲಿದ್ದೂ ಇದಕ್ಕೆ ಕಾರಣವೆಂದು ತಿಳಿದು ಬಂದಿದೆ. ಟೈಟಾನಿಕ್ ಕುರಿತಾದ ಸಾಕ್ಷ್ಯಚಿತ್ರವೊಂದರಲ್ಲಿ ಈ ರಹಸ್ಯ ಬಯಲಾಗಿದೆ. 1921ರಲ್ಲಾದ ಈ ದುರಂತದಲ್ಲಿ 1500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಬಾಯ್ಲರ್ ವಿಭಾಗದಲ್ಲಿದ್ದ ಕಲ್ಲಿದ್ದಲಿನ ಬಂಕರ್'ನಲ್ಲಿ ನಿರಂತವಾಗಿ ಹೊತ್ತಿಕೊಂಡಿರುತ್ತಿದ್ದ ಬೆಂಕಿ ಯಿಂದಾಗಿ ಹಡಗಿನ ಕೆಳಭಾಗ ತೀರಾ ದುರ್ಬಲಗೊಂಡಿತ್ತು.

ಸಾಕ್ಷ್ಯಚಿತ್ರದಲ್ಲಿ ತೋರಿಸಿರುವ ಈ ವಿಚಾರವನ್ನು ಐರಿಶ್ ಪತ್ರಕರ್ತ ಹಾಗೂ ಲೇಖಕ ಸೆನನ್ ಮೋಲಾನಿ ಎಂಬವರು ಪ್ರತಿಪಾದಿಸಿದ್ದಾರೆ. ಹಡಗು ದಕ್ಷಿಣದ ಕಡೆಗೆ ತೆರಳುವ ಮೊದಲು ತೆಗೆದ ಚಿತ್ರಗಳಲ್ಲಿ ಹಡಗಿನ ತಳಭಾಗದಲ್ಲಿ ಕಪ್ಪು ಗುರುತುಗಳಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇದೇ ಸಂದರ್ಭದಲ್ಲಿ ಹಡಗಿಗೆ ಹಿಮಬಂಡೆಗಳೂ ಬಂದು ಅಪ್ಪಳಿಸುತ್ತವೆ ಈ ವಿಚಾರ ಪತ್ರಕರ್ತನ ಸಿದ್ಧಾಂತಕ್ಕೆ ಬಲ ನೀಡುವಂತಿದೆ.

ಪತ್ರಕರ್ತ ಮೊಲಾನಿ ಈ ದುರಂತಕ್ಕೆ ಸಂಬಂಧಿಸಿದಂತೆ 30 ವರ್ಷ ಅಧ್ಯಯನ ನಡೆಸಿದ್ದಾರೆ. ಟೈಮ್ಸ್ ಕೂಡಾ ಮೊಲಾನಿಯ ಈ ಮಾತುಗಳನ್ನು ಅನುಮೋದಿಸಿದೆ. ಈ ಕುರಿತಾಗಿ ಮಾತನಾಡಿರುವ ಪತ್ರಕರ್ತ 'ಟೈಟಾನಿಕ್ ನಿರ್ಮಿಸಿದ ಕಂಪೆನಿಯ ಅಧ್ಯಕ್ಷ ಜೆ ಬ್ರೂಸ್ ಇಸ್ಮಾಯ್'ನ್ನು ಹಡಗಿನಲ್ಲಿ ಕೆಲವೇ ಲೈಫ್ ಬೋಟ್'ಗಳನ್ನು ಇರಿಸಿದ್ದಕ್ಕಾಗಿ ಜೀವಮಾನವಿಡೀ ಓರ್ವ ಹೇಡಿ ಎಂದು ಹಿಯಾಳಿಸಿದ್ದರು. ಆದರೆ ಅವರಿಗೆ ಬೆಂಕಿಯ ವಿಚಾರ ತಿಳಿದಿತ್ತು ಆದರೆ ದುರಂತದ ಬಳಿಕ ಈ ಕುರಿತಾಗಿ ಯಾರೂ ಅವರ ಬಳಿ ಈ ಕುರಿತಾಗಿ ಕೇಳಲೇ ಇಲ್ಲ' ಎಂದಿದ್ದಾರೆ.

ಕೃಪೆ: ಲೈವ್ ಇಂಡಿಯಾ