ಗೌರಿ ಲಂಕೇಶ್ ಹಂತಕರನ್ನು ವಿಶೇಷ ತನಿಖಾ ತಂಡ ಹುಡುಕಾಡುತ್ತಿದೆ. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಪ್ರತಿ ದಿನವೂ ವಿಶೇಷ ತನಿಖಾ ತಂಡದಿಂದ ವಿಚಾರಣೆ ನಡಯುತ್ತಿದೆ. ಈ ನಿಟ್ಟಿನಲ್ಲಿ ಎಸ್'ಐಟಿ ತಂಡ ಈವರೆಗೆ 80 ಜನರ ವಿಚಾರಣೆ ನಡೆಸಿದೆ.
ಬೆಂಗಳೂರು(ಸೆ.14): ಗೌರಿ ಲಂಕೇಶ್ ಹಂತಕರನ್ನು ವಿಶೇಷ ತನಿಖಾ ತಂಡ ಹುಡುಕಾಡುತ್ತಿದೆ. ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಪ್ರತಿ ದಿನವೂ ವಿಶೇಷ ತನಿಖಾ ತಂಡದಿಂದ ವಿಚಾರಣೆ ನಡಯುತ್ತಿದೆ. ಈ ನಿಟ್ಟಿನಲ್ಲಿ ಎಸ್'ಐಟಿ ತಂಡ ಈವರೆಗೆ 80 ಜನರ ವಿಚಾರಣೆ ನಡೆಸಿದೆ.
ಎಸ್'ಐಟಿ ರಾಜಕೀಯ ನಾಯಕರೊಬ್ಬರ ಆಪ್ತ ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದು, ಇದೀಗ ಗೌರಿ ಲಂಕೇಶ್ ಹತ್ಯೆಗೆ ಇದೆಯಾ ರಿಯಲ್ ಎಸ್ಟೇಟ್ ಲಿಂಕ್ ಇದೆಯಾ ಎಂಬ ಅನುಮಾನವನ್ನು ಹುಟ್ಟು ಹಾಕಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿಗೆ ಅರುಣ್ ಎಂಬುವವರಿಗೆ ಎಸ್ಐಟಿ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಆರಂಭದಲ್ಲಿ ಉದ್ಯಮಿ ಅರುಣ್ ವಿಚಾರಣೆಗೆ ಹಾಜರಾಗಲು ಹಿಂದೇಟು ಹಾಕಿದ್ದು, ಬಳಿಕ ಪೊಲೀಸರ ಖಡಕ್ ವಾರ್ನಿಂಗ್'ನಿಂದಾಗಿ ಹಾಜರಾಗಲು ಒಪ್ಪಿಗೆ ಸೂಚಿಸಿರುವ ವಿಚಾರ ತಿಳಿದು ಬಂದಿದೆ.
ಇನ್ನು ಉದ್ಯಮಿ ಅರುಣ್, ನೆಲಮಂಗಲದ ಬಳಿ ಇರುವ ಗೌರಿ ಲಂಕೇಶ್ ಕುಟುಂಬಕ್ಕೆ ಸೇರಿದ ಫಾರ್ಮ್ ಹೌಸ್'ನಲ್ಲಿ ಲೇಔಟ್ ನಿರ್ಮಿಸಲು ಪ್ಲಾನ್ ಮಾಡಿದ್ದರು. ಆದರೆ ಫಾರ್ಮ್ ಹೌಸ್ ಮಾಲೀಕತ್ವದ ವಿಷಯದಲ್ಲಿ ಕುಟುಂಬ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿತ್ತು ಎನ್ನುವ ಮಾತುಗಳು ಕೇಳಿ ಬಂದಿವೆ.
