ರೈಲುಗಳಲ್ಲಿ ಬರಲಿದೆ ವ್ಯಾಕ್ಯೂಮ್ ಬಯೋ ಟಾಯ್ಲೆಟ್..!

Ready to replace bio-toilets with airplane-like toilets: Piyush Goyal
Highlights

ರೈಲುಗಳಲ್ಲಿ ಬರಲಿದೆ ವ್ಯಾಕ್ಯೂಮ್ ಬಯೋ ಟಾಯ್ಲೆಟ್

ವಿಮಾದಲ್ಲಿರುವ ವ್ಯಾಕ್ಯೂಮ್ ಬಯೋ ಟಾಯ್ಲೆಟ್

ಬಯೋ ಟಾಯ್ಲೆಟ್ ಬದಲಾಗಿ ವ್ಯಾಕ್ಯೂಮ್ ಬಯೋ ಟಾಯ್ಲೆಟ್

ಏನಿದು ಜೈವಿಕ ನಿರ್ವಾತ ಶೌಚಾಲಯ?

ನವದೆಹಲಿ(ಜೂ.17): ಭಾರತೀಯ ರೈಲ್ವೆ ಬಹುತೇಕ ಎಲ್ಲಾ ರೈಲುಗಳಲ್ಲೂ ಬಯೋ ಟಾಯ್ಲೆಟ್ ಅಳವಡಿಸಿಯಾಗಿದೆ. ಇನ್ನೇನು ಮಾರ್ಚ್ 2019 ರೊಳಗೆ ಶೇ.100 ರಷ್ಟು ರೈಲುಗಳು ಬಯೋ ಟಾಯ್ಲೆಟ್ ನ್ನು ಹೊಂದಲಿವೆ.

ಆದರೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಇದೀಗ ಮತ್ತೊಂದು ಭಾರೀ ಯೋಜನೆಯನ್ನು ರೂಪಿಸುತ್ತಿದ್ದಾರೆ. ವಿಮಾನಯಾನ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸಲು, ಎಲ್ಲಾ ರೈಲುಗಳಿಗೂ ವ್ಯಾಕ್ಯೂಮ್ ಬಯೋ ಟಾಯ್ಲೆಟ್ ಅಳವಡಿಸುವ ಯೋಜನೆ ಇದೀಗ ಸಿದ್ದವಾಗುತ್ತಿದೆ.

ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, ರೈಲುಗಳಲ್ಲಿ ಬಯೋ ಟಾಯ್ಲೆಟ್ ಬದಲಾಗಿ ವಿಮಾನಗಳಲ್ಲಿ ಇರುವಂತೆ ವ್ಯಾಕ್ಯೂಮ್ ಬಯೋ ಟಾಯ್ಲೆಟ್ ಅಳವಡಿಸಲು ಯೋಜನೆ ಸಿದ್ದಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. 

ವಿಮಾನಗಳಲ್ಲಿ ಇರುವಂತೆ ನಿರ್ವಾತ ಜೈವಿಕ ಶೌಚಾಲಯಗಳನ್ನು ಎಲ್ಲಾ ರೈಲುಗಳಲ್ಲೂ ಅಳವಡಿಸಲು ಮುಂದಾಗಿದೆ ರೈಲ್ವೆ ಇಲಾಖೆ. ಈಗಾಗಲೇ ಇಂತಹ 500 ನಿರ್ವಾತ ಜೈವಿಕ ಶೌಚಾಲಯಗಳಿಗಾಗಿ ಆರ್ಡರ್ ಮಾಡಲಾಗಿದ್ದು, ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕ ದೇಶದ ಎಲ್ಲಾ ರೈಲುಗಳಲ್ಲಿ ಇರುವ ಸುಮಾರು 2.5 ಲಕ್ಷ ಬಯೋ ಟಾಯ್ಲೆಟ್ ಗಳನ್ನು ಬದಲಿಸಿ ನಿರ್ವಾತ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಸದ್ಯ ಪ್ರತಿ ಟಾಯ್ಲೆಟ್ ಗೆ ಒಂದು ಲಕ್ಷ ರೂ.ನಂತೆ ಸುಮಾರು 37,411ಕೋಚ್ ಗಳಲ್ಲಿ  1,36,965 ಬಯೋ ಟಾಯ್ಲೆಟ್ ಅಳವಡಿಸಲಾಗಿದೆ. ಆದರೆ ನಿರ್ವಾತ  ಜೈವಿಕ ಶೌಚಾಲಯಗಳ ಪ್ರಯೋಗ ಯಶಸ್ವಿಯಾದರೆ ಇವುಗಳನ್ನು ಬದಲಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. 

loader