ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನ ಮಾಡಲು, ಭಾರೀ ರಾಜಕೀಯ ಬೆಲೆ ತೆರುವುದಕ್ಕೂ ಸಿದ್ಧ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನವದೆಹಲಿ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನ ಮಾಡಲು, ಭಾರೀ ರಾಜಕೀಯ ಬೆಲೆ ತೆರುವುದಕ್ಕೂ ಸಿದ್ಧ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಯಾವಾಗ ಬಹುತೇಕ ಹಣಕಾಸು ವ್ಯವಹಾರಗಳು ಡಿಜಿಟಲ್ ರೂಪ ಪಡೆದುಕೊಳ್ಳುತ್ತವೋ, ಆಗ ಸಂಘಟಿತ ಭ್ರಷ್ಟಾಚಾರ ಬಹಳ ಮಟ್ಟಿಗೆ ಕಡಿಮೆಯಾಗುವುದು. ಅದಕ್ಕಾಗಿ ನಾನು ಭಾರೀ ರಾಜಕೀಯ ಬೆಲೆಯನ್ನು ತೆರಬೇಕು ಎಂದು ಗೊತ್ತಿದೆ, ಅದಾಗ್ಯೂ ನಾನದಕ್ಕೆ ಸಿದ್ಧನಾಗಿದ್ದೇನೆ’ ಎಂದು ‘ಹಿಂದೂಸ್ತಾನ್ ಟೈಮ್ಸ್ ಲೀಡರ್’ಶಿಪ್ ಸಮ್ಮಿಟ್’ನಲ್ಲಿ ಭಾಗವಹಿಸಿ ಮೋದಿ ಹೇಳಿದ್ದಾರೆ.
ನೋಟು ಅಮಾನ್ಯ ಕ್ರಮದ ಬಳಿಕ ದೇಶದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಕಾಳಧನಿಕರು ಭಯಗೊಂಡಿದ್ದಾರೆ. ಕಪ್ಪುಹಣವು ಆರ್ಥಿಕ ಮುಖ್ಯವಾಹಿನಿಗೆ ಸೇರಿಕೊಂಡಿದೆ, ಎಂದು ಮೋದಿ ಹೇಳಿದ್ದಾರೆ.
ಬ್ರಿಟನ್, ಅಮೇರಿಕಾದಲ್ಲಿ ‘ಅಬ್ ಕಿ ಬಾರ್ ಕ್ಯಾಮರೂನ್ ಸರ್ಕಾರ್, ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಘೋಷಣೆಗಳು ಮೊಳಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಹೆಚ್ಚುತ್ತಿರುವುದಕ್ಕೆ ಪುರಾವೆಯಾಗಿದೆ ಎಂದು ಅವರು ಹೇಳಿದ್ದಾರೆ.
