ಚಂದನವನದ ಕುಚಿಕು ಗೆಳೆಯರೆಂದೇ ಖ್ಯಾತಿ ಪಡೆದ ದರ್ಶನ್ ಹಾಗೂ ಸುದೀಪ್ ನಡುವೆ ಈಗ ಕಂದಕವೇರ್ಪಟ್ಟಿದೆ. 2002ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮೆಜೆಸ್ಟಿಕ್ ಸಿನಿಮಾ ಕುರಿತಾಗಿ ಸುದೀಪ್ ನೀಡಿದ ಹೇಳಿಕೆಯಿಂದ ಸಿಟ್ಟುಗೊಂಡಿರುವ ದರ್ಶನ್ 'ನಾವು ಇನ್ಮುಂದೆ ಗೆಳೆಯರಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು(ಮಾ.06): ಚಂದನವನದ ಕುಚಿಕು ಗೆಳೆಯರೆಂದೇ ಖ್ಯಾತಿ ಪಡೆದ ದರ್ಶನ್ ಹಾಗೂ ಸುದೀಪ್ ನಡುವೆ ಈಗ ಕಂದಕವೇರ್ಪಟ್ಟಿದೆ. 2002ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮೆಜೆಸ್ಟಿಕ್ ಸಿನಿಮಾ ಕುರಿತಾಗಿ ಸುದೀಪ್ ನೀಡಿದ ಹೇಳಿಕೆಯಿಂದ ಸಿಟ್ಟುಗೊಂಡಿರುವ ದರ್ಶನ್ 'ನಾವು ಇನ್ಮುಂದೆ ಗೆಳೆಯರಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಸ್ಯಾಂಡಲ್'ವುಡ್'ನ ಈ ಅಪೂರ್ವ ಗೆಳೆಯರ ನಡುವಿನ ಈ ಕಿಚ್ಚು ಕರ್ನಾಟಕದಾದ್ಯಂತ ಭಾರೀ ಚರ್ಚೆಗೀಡಾಗಿದೆ. ಅಲ್ಲದೇ ಅಭಿಮಾನಿಗಳಿಗೂ ಶಾಕ್ ನೀಡಿದಂತಾಗಿದೆ. ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ನಟರಿಬ್ಬರ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಹರಸಾಹಸ ಪಟ್ಟಿದ್ದಾರೆ. ಮಾಧ್ಯಮವರ್ಗದ ಪ್ರಶ್ನೆಗೆ ನಟ ದರ್ಶನ್ ಉತ್ತರಿಸಿದ್ದಾರೆ. ಆದರೆ ಕಿಚ್ಚ ಸುದೀಪ್ ಮಾತ್ರ ಈ ಕುರಿತಾಗಿ ಮಾತನಾಡದೆ 'ನೋ ಕಮೆಂಟ್ಸ್' ಎಂದು ಮೌನವಾಗಿ ತೆರಳಿದ್ದಾರೆ.
'ಹೆಬ್ಬುಲಿ' ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ನಟ ಸುದೀಪ್ ತುಮಕೂರಿಗೆ ತೆರಳಿದ್ದರು. ಈ ವೇಳೆ ಸಿನಿಮಾ ಕುರಿತಾಗಿ ಮಾಧ್ಯಮ ಮಂದಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸುದೀಪ್ ಬಳಿ ಪತ್ರಕರ್ತರೊಬ್ಬರು ದರ್ಶನ್ ಕುರಿತಾಗಿ ಕೇಳಲು ಮುಂದಾದರು. ಆದರೆ ದರ್ಶನ್ ಹೆಸರು ಕೇಳುತ್ತಿದ್ದಂತೆಯೇ, ಸುದೀಪ್ 'ನೋ ಕಾಮೆಂಟ್ಸ್' ಎಂದು ಪತ್ರಕರ್ತನ ಪ್ರಶ್ನೆಯನ್ನು ಸಂಪೂರ್ಣವಾಗಿ ಕೇಳದೆ ತೆರಳಿದ್ದಾರೆ.
