ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ 1 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದೆ. ಈಗಾಗಲೇ ನೋಟುಗಳು ಮುದ್ರಣವಾಗಿದ್ದು ಕಾಯ್ನೇಜ್ ಕಾಯ್ದೆ 2011 ರ ಅಡಿಯಲ್ಲಿ ಲೀಗಲ್ ಟೆಂಡರ್ ನಡೆಯುತ್ತಿದೆ.
ನವದೆಹಲಿ (ಮೇ.30): ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ 1 ರೂ. ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂದು ಹೇಳಿದೆ. ಈಗಾಗಲೇ ನೋಟುಗಳು ಮುದ್ರಣವಾಗಿದ್ದು ಕಾಯ್ನೇಜ್ ಕಾಯ್ದೆ 2011 ರ ಅಡಿಯಲ್ಲಿ ಲೀಗಲ್ ಟೆಂಡರ್ ನಡೆಯುತ್ತಿದೆ.
ಪ್ರಸ್ತುತ ಚಲಾವಣೆಯಲ್ಲಿರುವ ನೋಟು ಎಂದಿನಂತೆ ಮುಂದುವರೆಯಲಿದೆ ಎಂದು ಆರ್’ಬಿಐ ಹೇಳಿದೆ.
ಹೊಸ ನೋಟು ಗುಲಾಬಿ ಮತ್ತು ಹಸಿರು ಬಣ್ಣವನ್ನು ಹೊಂದಿದೆ. ಹಣಕಾಸು ಸಚಿವಾಲಯದ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ರವರ ದ್ವಿಭಾಷಿ ಸಹಿಯನ್ನು ಒಳಗೊಂಡಿದೆ. ನೋಟಿನಲ್ಲಿ ಸತ್ಯಮೇವ ಜಯತೆ ಮತ್ತು ಭಾರತ ಸರ್ಕಾರ ಎಂದು ಬರೆದುಕೊಂಡಿದೆ.
