1.50 ರೂ.ಕೋಟಿ ಮೊತ್ತದ ಕಪ್ಪುಹಣವನ್ನು ಅಕ್ರಮವಾಗಿ ಬದಲಾಯಿಸಲು ಪ್ರಯತ್ನಿಸುತ್ತಿದ್ದ ಆರ್ ಬಿಐ ಅಧಿಕಾರಿಯನ್ನು ಸಿಬಿಐ ಪೋಲಿಸರು ಬಂಧಿಸಿದ್ದು ಆರ್ ಬಿಐ ಇಂದು ಅವರನ್ನು ಅಮಾನತುಗೊಳಿಸಿದೆ.

ನವದೆಹಲಿ (ಡಿ.13): 1.50 ರೂ.ಕೋಟಿ ಮೊತ್ತದ ಕಪ್ಪುಹಣವನ್ನು ಅಕ್ರಮವಾಗಿ ಬದಲಾಯಿಸಲು ಪ್ರಯತ್ನಿಸುತ್ತಿದ್ದ ಆರ್ ಬಿಐ ಅಧಿಕಾರಿಯನ್ನು ಸಿಬಿಐ ಪೋಲಿಸರು ಬೆಂಗಳೂರಿನಲ್ಲಿ ಬಂಧಿಸಿದ್ದು ಆರ್ ಬಿಐ ಇಂದು ಅವರನ್ನು ಅಮಾನತುಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆರ್ ಬಿಐ ಆದೇಶಿಸಿದ್ದು, ಮಾಹಿತಿ ತಿಳಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ಪ್ರಾಥಮಿಕ ವರದಿ ಪ್ರಕಾರ ಬಂಧಿಸಿರುವ ಅಧಿಕಾರಿ ಕೆಳಹಂತದ ಅಧಿಕಾರಿ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಅವರ ಹೆಸರು ಹಾಗೂ ಹುದ್ದೆಯ ಬಗ್ಗೆ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.