ಬ್ಯಾಂಕಿನ ಬಾಂಡ್‌ಗಳ ಮಾರಾಟದ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ದೇಶದ ಪ್ರಮುಖ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಮೇಲೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ 59 ಕೋಟಿ ರು. ದಂಡ ವಿಧಿಸಿದೆ.

ಮುಂಬೈ: ಬ್ಯಾಂಕಿನ ಬಾಂಡ್‌ಗಳ ಮಾರಾಟದ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ದೇಶದ ಪ್ರಮುಖ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ಮೇಲೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ 59 ಕೋಟಿ ರು. ದಂಡ ವಿಧಿಸಿದೆ.

ಈ ಬಗ್ಗೆ ಗುರುವಾರ ಅಧಿಸೂಚನೆ ಹೊರಡಿಸಿರುವ ಆರ್‌ಬಿಐ, ‘ಕೇಂದ್ರೀಯ ಬ್ಯಾಂಕಿನ ನಿಯಮಗಳನ್ನು ಉಲ್ಲಂಘಿಸಿರುವ ಐಸಿಐಸಿಐ ಬ್ಯಾಂಕ್‌ ಲಿ.ಗೆ 58.9 ಕೋಟಿ ರು. ದಂಡ ವಿಧಿಸಲಾಗಿದೆ,’ ಎಂದು ಉಲ್ಲೇಖಿಸಲಾಗಿದೆ. ಕೇಂದ್ರೀಯ ಬ್ಯಾಂಕ್‌ ನಿಯಮಗಳಿಗೆ ವಿಧೇಯವಾಗಿಲ್ಲದ ಬ್ಯಾಂಕ್‌ಗಳ ಮೇಲೆ ಕ್ರಮ ಕೈಗೊಳ್ಳಲು ಇರುವ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.