ಮುಂಬೈ: ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿ ಆರ್‌ಬಿಐ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.

ಆರ್‌ಬಿಐನ ‘ನಿಮ್ಮ ಗ್ರಾಹಕರನ್ನು ತಿಳಿಯಿರಿ(ಕೆವೈಸಿ)’ ಮಾರ್ಗಸೂಚಿಯ ಪ್ರಕಾರ, ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯ. ಆದಾಗ್ಯೂ, ಆಧಾರ್‌ ಕಡ್ಡಾಯಗೊಳಿಸುವುದು ಸುಪ್ರೀಂ ಕೋರ್ಟ್‌ನ ಅಂತಿಮ ನಿರ್ಧಾರವನ್ನು ಆಧರಿಸಿದೆ ಎಂದು ಹೇಳಿಕೆಯೊಂದರಲ್ಲಿ ಅದು ಸ್ಪಷ್ಟಪಡಿಸಿದೆ. ಈ ನಿರ್ಧಾರದಿಂದ ಬ್ಯಾಂಕಿಂಗ್‌ ಸೇವೆಯಲ್ಲಿ ನಂಬಿಕೆಯ ವಾತಾವರಣ ಸೃಷ್ಟಿಸಲಿದೆ ಎಂದು ಮೂಲಗಳು ತಿಳಿಸಿವೆ.

ಆಧಾರ್‌ ಪಡೆಯಲು ಅರ್ಹರಲ್ಲದವರು ಅಥವಾ ಇಲ್ಲಿನ ನಿವಾಸಿಗಳಲ್ಲದವರು ಪಾನ್‌ ಕಾರ್ಡ್‌ ಅಥವಾ ಫಾರಂ ನಂ.60, ಒಂದು ಫೋಟೊಗ್ರಾಫ್‌ ಮತ್ತು ವಿಳಾಸ ಹಾಗೂ ಗುರುತನ್ನು ದೃಢೀಕರಿಸುವ ಯಾವುದಾದರೂ ದೃಢೀಕರಿಸಲ್ಪಟ್ಟಗುರುತು ಚೀಟಿಯನ್ನು ಸಲ್ಲಿಸಬಹುದು.