ಕಳೆದ 7 ವರ್ಷಗಳಿಂದ ರಿಪೋ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ನವದೆಹಲಿ(ಡಿ.06): ಭಾರತೀಯ ರಿಸರ್ವ್ ಬ್ಯಾಂಕ್ ಶೇ. 6ರಷ್ಟಿರುವ ರಿಪೋ ದರವನ್ನು ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಂಡಿದೆ.
ಆರ್'ಬಿಐ ಗವರ್ನ'ರ್ ಊರ್ಜಿತ್ ಪಟೇಲ್ ನೇತೃತ್ವದ 6 ಸದಸ್ಯರ ಹಣಕಾಸು ನೀತಿ ಸಮಿತಿ ಪ್ರಸ್ತುತ ವರ್ಷದ 5ನೇ ದ್ವೈಮಾಸಿಕ ನೀತಿ ಪರಿಸೀನಲಾ ಸಭೆಯಲ್ಲಿ ಈ ಕ್ರಮ ಕೈಗೊಂಡಿದೆ. ಕಚ್ಚಾ ಬೆಲೆಗಳ ಏರಿಕೆ, ಜಿಎಸ್ಟಿ ಅನುಷ್ಠಾನ ಹಾಗೂ ಹಣದುಬ್ಬರದ ಚೇತರಿಕೆಯ ಕ್ರಮಕ್ಕಾಗಿ ಈ ನಿಲುವು ತೆಗೆದುಕೊಂಡಿದೆ. ಕಳೆದ 7 ವರ್ಷಗಳಿಂದ ರಿಪೋ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ರಿವರ್ಸ್ ರೆಪೊ ದರ ಕೂಡ ಶೇಕಡಾ 5.75ರಷ್ಟಿದ್ದು, ಈ ದರವನ್ನು ಕೂಡ ಬದಲಿಸದೆ ಅದೇ ಸ್ಥಿತಿಯನ್ನು ಕಾಪಾಡಿಕೊಂಡು ಹೋಗಲು ನಿರ್ಧರಿಸಿದೆ. ರಿಸರ್ವ್ ಬ್ಯಾಂಕ್ ನೀತಿ ದರವನ್ನು ಕೂಡ ಕಳೆದ ಏಳು ವರ್ಷಗಳಲ್ಲಿ ಬದಲಾಯಿಸದೆ ಶೇಕಡಾ 6ರಷ್ಟು ಕಾಪಾಡಿಕೊಂಡು ಬಂದಿದೆ.
