ಸಂದರ್ಭ ಬಣ್ಣಗಳ ಜೊತೆ ಆಡುವಾಗ ನೋಟುಗಳಿಗೆ ಅದು ತಗುಲುವ ಸಾಧ್ಯತೆ ಹೆಚ್ಚಿರುವುದರಿಂದ, ಹಬ್ಬದ ಸಂದರ್ಭ ಹೆಚ್ಚಿನವರು ಡಿಜಿಟಲ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲಿ ಎಂಬುದು ಇದರ ಹಿಂದಿನ ಉದ್ದೇಶವೆಂದೂ ಹೇಳಲಾಗಿದೆ. ಆರ್‌ಬಿಐನ  ಸ್ವಚ್ಛ ನೋಟು ನೀತಿಯನ್ವಯ ಈ ನಿರ್ದೇಶನ ನೀಡಲಾಗಿದೆ.

ನವದೆಹಲಿ(ಮಾ.09): ಈ ಬಾರಿಯ ಹೋಳಿ ಹಬ್ಬದ ಸಂಭ್ರಮ ಸವಿಯುವವರು ತಮ್ಮ ನೋಟುಗಳ ವಿಷಯದಲ್ಲಿ ಭಾರೀ ಎಚ್ಚರಿಕೆ ವಹಿಸಿಕೊಳ್ಳಬೇಕಾದ ಅಗತ್ಯವಿದೆ. ಕಾರಣ, 500 ಮತ್ತು 2000 ವೌಲ್ಯದ ನೊಟುಗಳಿಗೆ ಬಣ್ಣ ತಗುಲಿದ್ದರೆ, ಅಂಥ ನೋಟು ಸ್ವೀಕರಿಸಬೇಡಿ ಎಂದು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ. ಹೋಳಿ ಹಬ್ಬದ ಸಂದರ್ಭ ಬಣ್ಣಗಳ ಜೊತೆ ಆಡುವಾಗ ನೋಟುಗಳಿಗೆ ಅದು ತಗುಲುವ ಸಾಧ್ಯತೆ ಹೆಚ್ಚಿರುವುದರಿಂದ, ಹಬ್ಬದ ಸಂದರ್ಭ ಹೆಚ್ಚಿನವರು ಡಿಜಿಟಲ್ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲಿ ಎಂಬುದು ಇದರ ಹಿಂದಿನ ಉದ್ದೇಶವೆಂದೂ ಹೇಳಲಾಗಿದೆ. ಆರ್‌ಬಿಐನ ಸ್ವಚ್ಛ ನೋಟು ನೀತಿಯನ್ವಯ ಈ ನಿರ್ದೇಶನ ನೀಡಲಾಗಿದೆ.