ಗರಿಷ್ಠ ಮುಖಬೆಲೆಯ ನೋಟು ನಿಷೇಧದ ಬಳಿಕ ಎದುರಾಗುವ ನೋಟು ಕೊರತೆಗೆ ಆರ್ ಬಿಐ ಸಂಪೂರ್ಣ ತಯಾರಿ ನಡೆಸಿಕೊಂಡಿದ್ದು  ಡಿ. 30 ವರೆಗೆ ಸಾಕಾಗುವಷ್ಟು ರೂ. 500 ಹಾಗೂ 2000 ಸಾವಿರದ ನೋಟುಗಳನ್ನು ಆರ್ ಬಿಐ ಹೊಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ನವದೆಹಲಿ (ಡಿ. 20): ಗರಿಷ್ಠ ಮುಖಬೆಲೆಯ ನೋಟು ನಿಷೇಧದ ಬಳಿಕ ಎದುರಾಗುವ ನೋಟು ಕೊರತೆಗೆ ಆರ್ ಬಿಐ ಸಂಪೂರ್ಣ ತಯಾರಿ ನಡೆಸಿಕೊಂಡಿದ್ದು ಡಿ. 30 ವರೆಗೆ ಸಾಕಾಗುವಷ್ಟು ರೂ. 500 ಹಾಗೂ 2000 ಸಾವಿರದ ನೋಟುಗಳನ್ನು ಆರ್ ಬಿಐ ಹೊಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಆರ್ ಬಿಐ ಬ್ಯಾಂಕುಗಳಿಗೆ ಸಾಕಾಗುವಷ್ಟು ಹಣವನ್ನು ಬಿಡುಗಡೆ ಮಾಡದಿರುವ ದಿನವೇ ಇಲ್ಲ. ಅದಕ್ಕಾಗಿ ಸಾಕಷ್ಟು ಪೂರ್ವ ತಯಾರಿ ನಡೆಸಿಕೊಂಡಿದೆ. ಡಿ. 30 ವರೆಗೆ ಮಾತ್ರವಲ್ಲ ಅದಕ್ಕಿಂತ ಜಾಸ್ತಿ ದಿನ ಸಾಕಾಗುವಷ್ಟು ಹಣವನ್ನು ಆರ್'ಬಿಐ ಹೊಂದಿದೆ ಎಂದು ಜೇಟ್ಲಿ ಹೇಳಿದ್ದಾರೆ.

ನೋಟು ನಿಷೇಧಕ್ಕೂ ಮುನ್ನ ಸರ್ಕಾರ 200 ಕೋಟಿಯಷ್ಟು 2 ಸಾವಿರದ ನೋಟುಗಳನ್ನು ಮುದ್ರಿಸಿದೆ. ಅದರ ಅದರ ಒಟ್ಟು ಮೌಲ್ಯ 4 ಲಕ್ಷ ಕೋಟಿಯಾಗಿದೆ ಎಂದು ಹಣಕಾಸು ಸಚಿವಾಲಯದ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.