ಗೃಹ ಸಾಲ ಪಡೆದವರಿಗೊಂದು ಸಿಹಿ ಸುದ್ದಿ. ಆರ್‌ಬಿಐ ಬಡ್ಡಿ ದರ ಇಳಿಸಿದರೂ ಬ್ಯಾಂಕಿನವರು ಗೃಹ ಸಾಲದ ಬಡ್ಡಿ ದರ ಇಳಿಸಿಲ್ಲ ಅಥವಾ ಶುಲ್ಕ ಕಟ್ಟಿ ಅದನ್ನು ಇಳಿಕೆ ಮಾಡಿಕೊಳ್ಳಬೇಕು ಎಂಬ ತಲೆನೋವು ಇನ್ಮುಂದೆ ನಿಮಗೆ ಇರುವುದಿಲ್ಲ.

ಮುಂಬೈ: ಗೃಹ ಸಾಲ ಪಡೆದವರಿಗೊಂದು ಸಿಹಿ ಸುದ್ದಿ. ಆರ್‌ಬಿಐ ಬಡ್ಡಿ ದರ ಇಳಿಸಿದರೂ ಬ್ಯಾಂಕಿನವರು ಗೃಹ ಸಾಲದ ಬಡ್ಡಿ ದರ ಇಳಿಸಿಲ್ಲ ಅಥವಾ ಶುಲ್ಕ ಕಟ್ಟಿ ಅದನ್ನು ಇಳಿಕೆ ಮಾಡಿಕೊಳ್ಳಬೇಕು ಎಂಬ ತಲೆನೋವು ಇನ್ಮುಂದೆ ನಿಮಗೆ ಇರುವುದಿಲ್ಲ.

ನೀವು 2016 ರ ಏಪ್ರಿಲ್‌ಗಿಂತ ಮೊದಲು ಗೃಹ ಸಾಲ ತೆಗೆದುಕೊಂಡಿದ್ದರೂ ಎಂಸಿಎಲ್ ಆರ್ (ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್) ಎಂಬ ಹೊಸ ಮಾನದಂಡದ ಪ್ರಕಾರವೇ ಬ್ಯಾಂಕುಗಳು ಬಡ್ಡಿ ದರ ನಿಗದಿಪಡಿಸಬೇಕು ಎಂದು ಆರ್‌ಬಿಐ ಆದೇಶ ನೀಡಿದೆ.

ಒಮ್ಮೆ ನಿಮ್ಮ ಗೃಹಸಾಲ ಎಂಸಿಎಲ್‌ಆರ್ ಪದ್ಧತಿಗೆ ಪರಿವರ್ತಿತವಾದರೆ, ಮುಂದೆ ಆರ್‌ಬಿಐ ಬಡ್ಡಿ ದರ ಇಳಿಕೆ/ ಏರಿಕೆ ಮಾಡಿದಾಗಲೆಲ್ಲ ಶೀಘ್ರವಾಗಿ ಮತ್ತು ಶುಲ್ಕವಿಲ್ಲದೆ ನಿಮ್ಮ ಗೃಹಸಾಲದ ಬಡ್ಡಿ ದರವೂ ಇಳಿಕೆ/ಏರಿಕೆ ಆಗುತ್ತದೆ.

ಬಡ್ಡಿದರ ಯಥಾಸ್ಥಿತಿ: ಕೊನೆಯ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿರುವ ಆರ್‌ಬಿಐ, ನಿರೀಕ್ಷೆಯಂತೆ ಸಾಲದ ಮೇಲಿನ ಬಡ್ಡಿ ದರ ಯಥಾಸ್ಥಿತಿಯಲ್ಲಿರಿಸಿದೆ.