ಸೆ.4, 5ಕ್ಕೆ ಆರ್‌ಬಿಐ ನೌಕರರ ಸಾಮೂಹಿಕ ರಜೆ | ಬ್ಯಾಂಕ್‌ ವ್ಯವಹಾರದ ಮೇಲೆ ಪರಿಣಾಮ

ಕೋಲ್ಕತ್ತಾ (ಆ. 29): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಿಸರ್ವ್ ಬ್ಯಾಂಕ್‌ನ ಅಧಿಕಾರಿಗಳು ಹಾಗೂ ನೌಕರರ ಸಂಘಟನೆ ಫೋರಂ(ಯುಎಫ್‌ಆರ್‌ಬಿಒಇ) ಸೆ.4 ಮತ್ತು 5ರಂದು ಎರಡು ದಿನಗಳ ಸಾಮೂಹಿಕ ರಜೆಗೆ ಕರೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರಲ್ಲಿ ಬ್ಯಾಂಕ್‌ನ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಲಿದ್ದು, ಕೇಂದ್ರೀಯ ಬ್ಯಾಂಕ್‌ ಹಾಗೂ ದೇಶಾದ್ಯಂತ ಇರುವ ಇದರ ಅಧೀನ ಬ್ಯಾಂಕ್‌ಗಳ ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

ರಿಟೇನರ್‌ಗಳಿಗೆ ಸಿಪಿಎಫ್‌(ಕಾಂಟ್ರಿಬಿಟರಿ ಪಿಎಫ್‌) ಪೆನ್ಶನ್‌ ಯೋಜನೆ ಹಾಗೂ 2012ರಿಂದ ನೇಮಕಗೊಂಡಿರುವವರಿಗೆ ಹೆಚ್ಚುವರಿ ಪಿಎಫ್‌ ನೀಡಬೇಕು ಎಂಬುದು ಫೋರಂನ ಆಗ್ರಹವಾಗಿದೆ. ಈ ಸಂಬಂಧ 2017ರಲ್ಲೇ ಊರ್ಜಿತ್‌ ಪಟೇಲ್‌ ಅವರು ಬರೆದಿದ್ದ ಪತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.