ಮುಸ್ಲಿಮರಿಗೆಂದೇ ಶರಿಯಾ ಬ್ಯಾಂಕಿಂಗ್ ಸ್ಥಾಪಿಸುವ ಪ್ರಯತ್ನವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೈಬಿಟ್ಟಿದೆ.
ನವದೆಹಲಿ: ಮುಸ್ಲಿಮರಿಗೆಂದೇ ಶರಿಯಾ ಬ್ಯಾಂಕಿಂಗ್ ಸ್ಥಾಪಿಸುವ ಪ್ರಯತ್ನವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕೈಬಿಟ್ಟಿದೆ.
ಈ ಪ್ರಸ್ತಾವನೆಯನ್ನು ತಾನು ಇನ್ನು ಮುಂದುವರಿಸ ಬಯಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. ಮಾಹಿತಿ ಹಕ್ಕು ಕಾಯಿದೆಯ ಅಡಿ ಕೇಳಲಾದ ಪ್ರಶ್ನೆಯೊಂದಕ್ಕೆ ಆರ್ಬಿಐ ಈ ರೀತಿ ಉತ್ತರಿಸಿದೆ.
ವಿವಿಧ ಬ್ಯಾಂಕಿಂಗ್ ಹಾಗೂ ಹಣಕಾಸು ವರ್ಗಗಳೊಂದಿಗೆ ಚರ್ಚಿಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
ಇಸ್ಲಾಂ ಪ್ರಕಾರ ಬಡ್ಡಿ ವಿಧಿಸುವುದು ಅಥವಾ ಪಡೆಯುವುದು ನಿಷಿದ್ಧವಾಗಿದೆ. ಈಗ ಅಸ್ತಿತ್ವದಲ್ಲಿರುವ ಸಾಮಾನ್ಯ ಬ್ಯಾಂಕ್ಗಳು ಬಡ್ಡಿ ವಿಧಿಸುವ ಅಥವಾ ನೀಡುವ ಕಾರಣ ಮುಸ್ಲಿಮರಿಗೆಂದೇ ಪ್ರತ್ಯೇಕ ಶರಿಯಾ ಬ್ಯಾಂಕಿಂಗ್ ವ್ಯವಸ್ಥೆ ಸ್ಥಾಪಿಸುವ ಉದ್ದೇಶವನ್ನು ಆರ್ಬಿಐ ಹೊಂದಿತ್ತು.
ಶರಿಯಾ ಬ್ಯಾಂಕ್ ಸ್ಥಾಪನೆಯಾದರೆ ಅದರಲ್ಲಿ ಯಾವುದೇ ಬಡ್ಡಿ ವ್ಯವಹಾರ ನಡೆಯುವುದನ್ನು ನಿಷೇಧಿಸಲಾಗುತ್ತಿತ್ತು
