Asianet Suvarna News Asianet Suvarna News

2000 ರೂ. ನೋಟಿನಲ್ಲಿ GPS ಅಳವಡಿಸಿಲ್ಲ - ಆರ್`ಬಿಐ ಸ್ಪಷ್ಟನೆ

ನೋಟುಗಳಿಗೆ ಜಿಪಿಎಸ್ ಅಳವಡಿಸುವ ತಂತ್ರಜ್ಞಾನವೇ ಅಸ್ತಿತ್ವದಲ್ಲಿಲ್ಲ ಎಂದು ಆರ್`ಬಿಐ ಸ್ಪಷ್ಟಪಡಿಸಿದೆ. ಹೊಸ ನೋಟಿನಲ್ಲಿ  ಮಹಾತ್ಮಾಗಾಂಧಿ ಚಿತ್ರದ ಜೊತೆ ಮಂಗಳಯಾನದ ಚಿತ್ರ ಇರಲಿದೆ ಎಂದು ಪತ್ರಿಕಾ ಹೇಳಿಕೆ ಸಹ ಬಿಡುಗಡೆಯಾಗಲಿದೆ.

rbi clarifies on notes gps technology

ನವದೆಹಲಿ(ನ.09): ನಿನ್ನೆ ರಾತ್ರಿಯಿಂದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನ ರದ್ದು ಮಾಡಲಾಗಿದೆ. ಇವುಗಳ ಬದಲಿಗೆ 500 ಮತ್ತು 2000 ನೋಟುಗಳನ್ನ ಬಿಡುಗಡೆ ಮಾಡಲು ಆರ್`ಬಿಐ ಮುಂದಾಗಿದೆ. ಆದರೆ, ಈ ಹೊಸ ನೋಟುಗಳಲ್ಲಿ ಜಿಪಿಎಸ್ ತಂತ್ರಜ್ಞಾನ ಅಳವಡಿಸಲಾಗಿದೆ ಎಂಬ ವದಂತಿ ಹರಡಿತ್ತು. ಆದರೆ, ಇದೀಗ ಮಾಧ್ಯಮಗಳಿಗೆ ಆರ್‌ಬಿಐ ವಕ್ತಾರ ಅಲ್ಪನಾ ಕಿಲ್ಲಾವಾಲಾ ಸ್ಪಷ್ಟನೆ  ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದ್ಧಾರೆ.

ಇದೇವೇಳೆ, ನೋಟುಗಳಿಗೆ ಜಿಪಿಎಸ್ ಅಳವಡಿಸುವ ತಂತ್ರಜ್ಞಾನವೇ ಅಸ್ತಿತ್ವದಲ್ಲಿಲ್ಲ ಎಂದು ಆರ್`ಬಿಐ ಸ್ಪಷ್ಟಪಡಿಸಿದೆ. ಹೊಸ ನೋಟಿನಲ್ಲಿ  ಮಹಾತ್ಮಾಗಾಂಧಿ ಚಿತ್ರದ ಜೊತೆ ಮಂಗಳಯಾನದ ಚಿತ್ರ ಇರಲಿದೆ ಎಂದು ಪತ್ರಿಕಾ ಹೇಳಿಕೆ ಸಹ ಬಿಡುಗಡೆಯಾಗಲಿದೆ.

.

  

500, 2000 ರೂ. ಮುಖಬೆಲೆ ಹೊಸ ನೋಟಿನಲ್ಲಿ GPS ಅಳವಡಿಸಿಲ್ಲ  

ಮಾಧ್ಯಮಗಳಿಗೆ ಆರ್‌ಬಿಐ ವಕ್ತಾರ ಅಲ್ಪನಾ ಕಿಲ್ಲಾವಾಲಾ ಸ್ಪಷ್ಟನೆ 

ಹೊಸ ನೋಟಿನಲ್ಲಿ GPS ಅಳವಡಿಸಲಾಗಿದೆ ಎಂಬುದು ಸುಳ್ಳು  

ನೋಟಿಗೆ GPS ಅಳವಡಿಸುವಂಥ ತಂತ್ರಜ್ಞಾನ ಸದ್ಯ ಅಸ್ತಿತ್ವದಲ್ಲಿಲ್ಲ 

ಹೀಗಾಗಿ ಇಂತಹ ವದಂತಿಗಳಿಗೆ ಕಿವಿಗೊಡದಂತೆ ಮನವಿ 

ಮಾಧ್ಯಮಗಳಿಗೆ ಆರ್‌ಬಿಐ ವಕ್ತಾರ ಅಲ್ಪನಾ ಕಿಲ್ಲಾವಾಲಾ ಸ್ಪಷ್ಟನೆ