. ಹತ್ಯೆ ಆರೋಪಿಗಳನ್ನು ಪೊಲೀಸ್ ವಾಹನದಲ್ಲಿ ಕರೆತರಬೇಕು, ಆದರೆ ಖಾಸಗಿ ಇನ್ನೋವಾದಲ್ಲಿ ಕರೆತಂದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಉಡುಪಿ(ಆ.21): ಉದ್ಯಮಿ ಭಾಸ್ಕರ್ ಶೆಟ್ಟಿಯನ್ನು ಹತ್ಯೆಗೈದು ಹೋಮಕುಂಡದಲ್ಲಿ ದಹಿಸಿದ್ದ ಆರೋಪಿಗಳಿಗೆ, ವಿಐಪಿ ಟ್ರೀಟ್ ಮೆಂಟ್ ಕೊಡಲಾಗ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ ಶೆಟ್ಟಿ, ಹಾಗೂ ನಿರಂಜನ ಭಟ್ ಹತ್ಯೆ ಆರೋಪಿಗಳಾಗಿದ್ದು, ಮಂಗಳೂರು ಕಾರಾಗೃಹದಿಂದ ಖಾಸಗಿ ಇನ್ನೊವಾ ಕಾರಿನಲ್ಲಿ ಮೂವರು ಆರೋಪಿಗಳು ಉಡುಪಿಗೆ ಬಂದಿದ್ದಾರೆ.
ಸರ್ಕಾರಿ ವಾಹನದ ಬದಲಿಗೆ ಖಾಸಗಿ ಟೂರಿಸ್ಟ್ ಇನ್ನೋವಾ ಕಾರು ಬಳಕೆ ಮಾಡಿರುವುದು ಕೆಂಗಣ್ಣಿಗೆ ಗುರಿಯಾಗಿದೆ. ಹತ್ಯೆ ಆರೋಪಿಗಳನ್ನು ಪೊಲೀಸ್ ವಾಹನದಲ್ಲಿ ಕರೆತರಬೇಕು, ಆದರೆ ಖಾಸಗಿ ಇನ್ನೋವಾದಲ್ಲಿ ಕರೆತಂದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
