ಸಚಿವ ಬಸವರಾಜ ರಾಯರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡುವುದರೊಂದಿಗೆ, ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆ ವಿಚಾರವು ಇಂದು ಹೊಸ ತಿರುವನ್ನು ಪಡೆದುಕೊಂಡಿದೆ.
ಬೆಂಗಳೂರು: ಸಚಿವ ಬಸವರಾಜ ರಾಯರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡುವುದರೊಂದಿಗೆ, ಪ್ರತ್ಯೇಕ ಲಿಂಗಾಯತ ಧರ್ಮ ಬೇಡಿಕೆ ವಿಚಾರವು ಇಂದು ಹೊಸ ತಿರುವನ್ನು ಪಡೆದುಕೊಂಡಿದೆ.
ಹಿಂದೂ ಧರ್ಮದಲ್ಲಿ ವರ್ಣಭೇದ ನೀತಿ ಇದೆ, ಹೀಗಾಗಿ ಲಿಂಗಾಯತ ಧರ್ಮ ಪ್ರತ್ಯೇಕವಾಗಲಿ ಎಂದಿದ್ದೇವೆ, ಎಂದು ರಾಯರೆಡ್ಡಿ ಹೇಳಿದ್ದಾರೆ.
ಶೈವ ಅಂತ ಸೇರಿದ ಕೂಡಲೇ ಅದು ಹಿಂದೂ ಧರ್ಮದ ಭಾಗ ಅಂತ ಆಗುತ್ತೆ. ಹೀಗಾಗಿ ಶೈವ ತೆಗೆದು ಹಾಕಿ ವೀರ ಲಿಂಗಾಯತ ಅಂತ ಮಾಡಿ ಎಂದೂ ಹೇಳಿದ್ದೇನೆ, ಧರ್ಮ ಯಾರು ಬೇಕಾದರೂ ಮಾಡಬಹುದು ಎಂದು ಅವರು ಹೇಳಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಸಮಿತಿಯೊಂದನ್ನು ರಚಿಸಲು ಒಪ್ಪಿದ್ದಾರೆ. 15 ಜನರ ಸಮಿತಿ ರಚನೆ ಆಗಬೇಕಿದೆ. ಈ ಸಮಿತಿಯಲ್ಲಿ ತಜ್ಞರು, ಸ್ವಾಮೀಜಿಗಳು ಎಲ್ಲರೂ ಇರಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಧರ್ಮ ಯಾರು ಬೇಕಾದರೂ ಮಾಡಬಹುದು, ನಾಳೆ ನಾನೇ ಒಂದು ಧರ್ಮ ಆರಂಭಿಸುತ್ತೇನೆ, ನಾಳೆ ನಾನೇ ಒಬ್ಬ ಸ್ವಾಮೀಜಿ ಆಗ್ತೇನೆ, ಅಲ್ಪಸಂಖ್ಯಾತ ಮಾನ್ಯತೆ ಕೊಡೋದಷ್ಟೇ ಸರ್ಕಾರದ ಕೆಲಸ, ಎಂದು ಅವರು ಹೇಳಿದ್ದಾರೆ.
ಲಿಂಗಾಯತ ಧರ್ಮ ಒಪ್ಪಿದರೆ ಬಹುದೇವರ ಉಪಾಸನೆ ಮಾಡುವಂತಿಲ್ಲ ಎಂದು ಅವರು ಹೇಳಿದ್ದಾರೆ.
