ರಾಜ್‌ ಕೋಟ್‌'ನ ಕಾಲವಾಡ್ ರಸ್ತೆಯಲ್ಲಿರುವ ‘ಜಡ್ಡೂಸ್ ಫುಡ್ ಫೀಲ್ಡ್’ ರೆಸ್ಟೋರೆಂಟ್‌'ನಲ್ಲಿ ಹಳಸಿದ ಆಹಾರವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನವದೆಹಲಿ(ಅ.08): ಕ್ರಿಕೆಟಿಗ ರವೀಂದ್ರ ಜಡೇಜಾ ಮಾಲೀಕತ್ವದ ಹೋಟೆಲ್ ಮೇಲೆ ರಾಜ್ ಕೋಟ್'ನ ನಗರಪಾಲಿಕೆಯ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ್ದು, ಹಳಸಿದ ಆಹಾರ ಪದಾರ್ಥಗಳನ್ನು ಪತ್ತೆ ಮಾಡಿದ್ದಾರೆ.
ಜಡೇಜಾ ಸೋದರಿ ನೈನಾಬಾ ಅನಿರುದ್ಧ ಸಿಂಗ್ ಈ ರೆಸ್ಟೋರೆಂಟ್'ನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ರಾಜ್ ಕೋಟ್'ನ ಕಾಲವಾಡ್ ರಸ್ತೆಯಲ್ಲಿರುವ ‘ಜಡ್ಡೂಸ್ ಫುಡ್ ಫೀಲ್ಡ್’ ರೆಸ್ಟೋರೆಂಟ್'ನಲ್ಲಿ ಹಳಸಿದ ಆಹಾರವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹೋಟೆಲ್'ನ ಫ್ರೀಜರ್'ನಲ್ಲಿ ಸಂಗ್ರಹಿಸಿಟ್ಟಿದ್ದ ಹಳಸಿದ ಅನ್ನ, ಗ್ರೇವಿ, ದಾಲ್ ಫ್ರೈ, ಅವಧಿ ಮೀರಿದ ಬೇಕರಿ ಪದಾರ್ಥಗಳು, ಕೊಳೆತ ತರಕಾರಿಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೇ ಅಡುಗೆಗೆ ಆರೋಗ್ಯಕ್ಕೆ ಹಾನಿಕಾರಕವಾದ ಅಜಿನೋ ಮೊಟೊ ಮತ್ತು ಕೃತಕ ಬಣ್ಣಗಳನ್ನು ಬಳಸುತ್ತಿರುವುದನ್ನೂ ಅಧಿಕಾರಿಗಳ ತಂಡ ಪತ್ತೆ ಮಾಡಿದೆ. ಈ ಸಂಬಂಧ ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ
