. ಪ್ರತಿವರ್ಷ ಅಭಿಮಾನಿಗಳಿಗೊಸ್ಕರ ಹುಟ್ಟು ಹಬ್ಬ ಆಚರಿಸಿಕೊಳ್ಳುವ ರವಿಮಾಮ ಈ ವರ್ಷ ಮೂರು ಸಿನಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಬೆಂಗಳೂರು(ಮೇ.30): ಕನ್ನಡ ಚಿತ್ರರಂಗ ಹಠವಾದಿ,ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್'ಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

56ನೇ ವಸಂತಕ್ಕೆ ಕಾಲಿಟ್ಟಿರೋ ಕ್ರೇಜಿಸ್ಟಾರ್ ರಾಜಾಜಿನಗರದಲ್ಲಿರೋ ನಿವಾಸದಲ್ಲಿ ಸಾವಿರಾರು ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಂಡರು. ಅಖಿಲ ಕರ್ನಾಟಕ ರವಿಚಂದ್ರನ್ ಫ್ಯಾನ್ಸ್ ಗ್ರೂಪ್ 56 ಕೆಜಿ ತೂಕದ ಕೇಕ್ ರವಿಚಂದ್ರನ್ ಕಟ್ ಮಾಡಿದ್ರು. ಪ್ರತಿವರ್ಷ ಅಭಿಮಾನಿಗಳಿಗೊಸ್ಕರ ಹುಟ್ಟು ಹಬ್ಬ ಆಚರಿಸಿಕೊಳ್ಳುವ ರವಿಮಾಮ ಈ ವರ್ಷ ಮೂರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ರವಿಚಂದ್ರನ್ ಅವರು ನಿರ್ಮಾಪಕ ಮುನಿರತ್ನ ನಿರ್ಮಾಣ ಮಾಡ್ತಾ ಇರೋ ಕುರುಕ್ಷೇತ್ರ ಸಿನಿಮಾದಲ್ಲಿ ಶ್ರೀ ಕೃಷ್ಣನ ಪಾತ್ರ ಮಾಡುತ್ತಿದ್ದು . ಇದಕ್ಕಾಗಿ ಕಳೆದ ಮೂರು ತಿಂಗಳುಗಳಿಂದ ಮಾಂಸಹಾರವನ್ನ ತ್ಯಜಿಸಿದ್ದಾರಂತೆ. ಕನಸುಗಾರನ ಈ ವರ್ಷದ ಹುಟ್ಟು ಹಬ್ಬಕ್ಕೆ ಮಗಳು ಒಂದು ಶರ್ಟ್​ನ್ನ ಗಿಫ್ಟ್ ಕೊಟ್ಟಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಕೂಡ ರವಿಚಂದ್ರನ್ ಮಧ್ಯಾಹ್ನದವರೆಗೆ ಅಭಿಮಾನಿಗಳ ಜೊತೆ ಇದ್ದು ನಂ ತಿರುಪತಿ ದೇವಸ್ಥಾನಕ್ಕೆ ಹೋಗಲಿದ್ದಾರೆ.