ಶಿಕ್ಷಣ ಸಚಿವ ತನ್ವೀರ್ ಸೇಠ್‌'ಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿದೆ.

ಬೆಂಗಳೂರು (ಜ.10): ಶಿಕ್ಷಣ ಸಚಿವ ತನ್ವೀರ್ ಸೇಠ್‌'ಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಬೆದರಿಕೆ ಕರೆ ಬಂದಿದೆ.

ಒಂದು ವಾರದಲ್ಲಿ 10 ಕೋಟಿ ಕೊಡು, ಇಲ್ಲ ಅಂದ್ರೆ ಕೊಲ್ಲುತ್ತೇನೆ. ಗುಂಡು ಹೊಡೆದು ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ರವಿ ಪೂಜಾರಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ತನ್ವೀರ್​ ಸೇಠ್​ ಬೆದರಿಕೆ ಬಗ್ಗೆ ಸಿಎಂ ಹಾಗೂ ಗೃಹ ಸಚಿವರ ಗಮನಕ್ಕೆ ತಂದಿದ್ದಾರೆ. ಡಿಜಿಪಿ ನೀಲಮಣಿ ಎನ್‌.ರಾಜುಗೆ ದೂರು ನೀಡಿದ್ದಾರೆ. ನಿನ್ನೆ ಸಂಜೆ ಅನಾಮದೇಯ ನಂಬರ್'ನಿಂದ ಜೀವ ಬೆದರಿಕೆ ಬಂದಿದೆ.