ಸುನೀಲ್ ಹೆಗ್ಗರವಳ್ಳಿ ಸುಪಾರಿ ಪ್ರಕರಣದಲ್ಲಿ ಜಾಮೀನು ಮೇಲೆ ಹೊರ ಬಂದಿರುವ ರವಿ ಬೆಳಗೆರೆ ತಮ್ಮ ಎಂದಿನ ಶೈಲಿಯಲ್ಲೇ ಸುನೀಲ್ ಹೆಗ್ಗರವಳ್ಳಿಗೆ ಝಾಡಿಸಿದ್ದಾರೆ. ‘ಹಾಯ್ ಬೆಂಗಳೂರು’ ಪತ್ರಿಕೆ ತುಂಬಾ ಹೆಗ್ಗರವಳ್ಳಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
ಬೆಂಗಳೂರು (ಡಿ.15): ಸುನೀಲ್ ಹೆಗ್ಗರವಳ್ಳಿ ಸುಪಾರಿ ಪ್ರಕರಣದಲ್ಲಿ ಜಾಮೀನು ಮೇಲೆ ಹೊರ ಬಂದಿರುವ ರವಿ ಬೆಳಗೆರೆ ತಮ್ಮ ಎಂದಿನ ಶೈಲಿಯಲ್ಲೇ ಸುನೀಲ್ ಹೆಗ್ಗರವಳ್ಳಿಗೆ ಝಾಡಿಸಿದ್ದಾರೆ. ‘ಹಾಯ್ ಬೆಂಗಳೂರು’ ಪತ್ರಿಕೆ ತುಂಬಾ ಹೆಗ್ಗರವಳ್ಳಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.
‘ಶನಿಮುಖಿ ಕೊಲೆಗೆ ಸುಪಾರಿ ಒಂದು ಕೇಡು’ ಎಂದು ಪತ್ರಿಕೆಯ ಮುಖಪುಟದಲ್ಲಿ ಬರೆದುಕೊಂಡಿದ್ದಾರೆ. ‘ನೋಟ್ಸ್ ಫ್ರಮ್ ಸೆಂಟ್ರಲ್ ಜೈಲ್’ ಎಂಬ ಟ್ಯಾಗ್ ಲೈನ್ ನೀಡಿದ್ದಾರೆ. ‘ಸುನೀಲ್ ಹೀಗೆ ವರ್ತಿಸಿದರೆ ಎಲ್ಲಿಂದ ನಗಬೇಕು’ ಸಾಫ್ಟ್ ಕಾರ್ನರ್ ಅಂಕಣದಲ್ಲಿ ಕಾಲೆಳೆದಿದ್ದಾರೆ. Nothing can stop me ಎಂದು ತಿರುಗೇಟು ನೀಡಿದ್ದಾರೆ.
ಈ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಬಲಹೀನ ಜಾಲದ ಕೃತ್ಯ ಇದಾಗಿದೆ. ಕಚೇರಿಯಲ್ಲಿ ನಾನು ನಿದ್ರೆಯಲ್ಲಿದ್ದಾಗ ಪೊಲೀಸರು ಬಂದು ಅರೆಸ್ಟ್ ಎಂದರು. ಹಲ್ಲುಜ್ಜಿಕೊಂಡು ಬರ್ತಿನಿ, ಕೂತಿರಿ ಎಂದು ಎದ್ದು ಹೋಗಿದ್ದೆ. ಹಾಯ್ ಬೆಂಗಳೂರು ಕಚೇರಿಯ ಮೂಲೆ ಬಿಡದೆ ಶೋಧಿಸಿದಾಗ ಸಿಕ್ಕಿದ್ದು ಸಿಗರೇಟ್ ತುಂಡಷ್ಟೇ ಎಂದು ಬರೆದುಕೊಂಡಿದ್ದಾರೆ.
ಅರೆಸ್ಟ್ ಮಾಡಲು ಬಂದಿದ್ದ ಪೊಲೀಸರು, ಸುನೀಲ್ ಹೆಗ್ಗರವಳ್ಳಿ ವಿಚಾರ ಪ್ರಸ್ತಾಪಿಸಿದ್ದಾರೆ. ನನ್ನ 15 ವರ್ಷದ ಜತೆಗಾರ ಸುನೀಲ್ ಹೆಗ್ಗರವಳ್ಳಿ. ಆದರೆ, ಶಶಿ ಹೇಳಿದ್ದು, ಸುನೀಲ್ ಹತ್ಯೆಗೆ ನಾನು 30 ಲಕ್ಷ ಕೊಟ್ಟನಂತೆ..! 15 ಸಾವಿರ ರೂ. ಅಡ್ವಾನ್ಸ್ ಹಣವನ್ನೂ ಕೊಟ್ಟಿದ್ದನಂತೆ. What a stupid talk ಎಂದು ಬರೆದುಕೊಂಡಿದ್ದಾರೆ.
‘ರವಿ ಬೆಳಗೆರೆ ನನ್ನ ಕೊಲ್ಲಿಸ್ತಾರೆ, ಜೀವ ಭಯ ಇದೆ’ ಎಂದು ಸುನೀಲ್ ಹೇಳಿದ್ದಾನೆ. ಸುನೀಲ್ ಆರೋಪಕ್ಕೆ ಎಲ್ಲಿಂದ ನಗಬೇಕು? 15 ವರ್ಷ ಜತೆಗೆ ದುಡಿದವರನ್ನು ಸುಪಾರಿ ಕೊಟ್ಟು ಕೊಲ್ಲಿಸಲಾ ? ಆಯ್ತು, ಕಟಕಟೆ, ಆಸ್ಪತ್ರೆ, ಜೈಲು... ಈಗ ಮೇಲು... I Am safe and cheerful. ನಿಮ್ಮ ಆಶಿರ್ವಾದಗಳೇ ಧೈರ್ಯ. ವಿವರ ಬರೆಯುತ್ತೇನೆ, ಬರಯಲೇ ಬೇಕು ಕೂಡ... ಉಸಿರುಗಟ್ಟಿಸುವಷ್ಟು ಎಂದು ಬರೆಯುತ್ತಾ ಅಂಕಣದ ಕೊನೆಯಲ್ಲಿ I love you ಎಂದು ಬರೆದುಕೊಂಡಿದ್ದಾರೆ.

