ಬೆಂಗಳೂರು(ಎ.06): ರಾಜ್ಯ ಸರ್ಕಾರ ಸದ್ದಿಲ್ಲದೆ ಜಮೀನುಗಳ ಮಾರ್ಗಸೂಚಿ ದರವನ್ನು ಶೇ.10ರಿಂದ ಶೇ.30ರ ವರೆಗೂ ಏರಿಕೆಯಾಗುವಂತಹ ಹೊಸ ನಿಯಮವನ್ನು ಏಪ್ರಿಲ್‌ 1ರಿಂದಲೇ ಜಾರಿಗೆ ತಂದಿದೆ. ಈವರೆಗೆ ಪರಿವರ್ತನೆಗೊಂಡ ಕೃಷಿ ಜಮೀನುಗಳು ಬಡಾವಣೆಯಾಗಿ ಅಭಿವೃದ್ಧಿಯಾಗದ ಕಾರಣ ಅವುಗಳನ್ನು ಎಕರೆ ಅಥವಾ ಗುಂಟೆ ಲೆಕ್ಕದಲ್ಲಿ ನೋಂದಾಯಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಇವುಗಳ ನೋಂದಣಿ ವೇಳೆ, ಜಮೀನಿನ ವ್ಯಾಪ್ತಿಯನ್ನು ಎಕರೆ ಅಥವಾ ಗುಂಟೆ ಪರಿಮಾಣದಲ್ಲಿ ಪರಿಗಣಿಸದೇ ಚ.ಮೀ. ಪರಿಮಾಣದಲ್ಲಿ ಪರಿಗಣಿಸಲಾಗುತ್ತದೆ ಮತ್ತು ಅಭಿವೃದ್ಧಿಗೊಂಡ ನಿವೇಶನದ ಮಾರ್ಗಸೂಚಿ ದರದ ಶೇ.30ರಷ್ಟುಮೊತ್ತವನ್ನು ಅದರ ಮೇಲೆ ವಿಧಿಸಲಿದೆ. ಹೀಗೆ ಮಾಡಿದಾಗ ಪರಿವರ್ತಿತ ಕೃಷಿ ಜಮೀನಿನ ಮಾರ್ಗಸೂಚಿ ದರವು ಹಾಲಿ ಪ್ರಮಾಣಕ್ಕಿಂತ ಶೇ. 10ರಿಂದ ಶೇ. 30ರವರೆಗೂ ಹೆಚ್ಚಾಗುವ ಸಂಭವವಿದೆ.
ಬೆಂಗಳೂರು(ಎ.06): ರಾಜ್ಯ ಸರ್ಕಾರ ಸದ್ದಿಲ್ಲದೆ ಜಮೀನುಗಳ ಮಾರ್ಗಸೂಚಿ ದರವನ್ನು ಶೇ.10ರಿಂದ ಶೇ.30ರ ವರೆಗೂ ಏರಿಕೆಯಾಗುವಂತಹ ಹೊಸ ನಿಯಮವನ್ನು ಏಪ್ರಿಲ್ 1ರಿಂದಲೇ ಜಾರಿಗೆ ತಂದಿದೆ.
ಈ ಕುರಿತು ಅಧಿಸೂಚನೆಯನ್ನು ಇತ್ತೀಚೆಗೆ ಹೊರಡಿಸ ಲಾಗಿದ್ದು, ನಿಯಮ ಏಪ್ರಿಲ್ 1ರಿಂದ ಜಾರಿಗೆ ಬಂದಿದೆ. ಹೊಸ ನಿಯಮದ ಪ್ರಕಾರ, ಅಭಿವೃದ್ಧಿಗೊಂಡ ನಿವೇಶ ನದ ಬೆಲೆಯೇ, ಪರಿವರ್ತನೆಯಾದ ಜಮೀನಿಗೂ ಅನ್ವಯವಾಗುವಂತೆ ಮಾಡಿ ಮಾರ್ಗಸೂಚಿ ದರ ಪರೋ ಕ್ಷವಾಗಿ ಏರಿಕೆಯಾಗುವಂತೆ ಮಾಡಲಾಗಿದೆ. ಹೀಗಾಗಿ ಇದರಿಂದ ಬೆಂಗಳೂರು ಸೇರಿ ಪ್ರಮುಖ ನಗರ ಮತ್ತು ಪಟ್ಟಣಗಳಲ್ಲಿ ಮಾರ್ಗ ಸೂಚಿ ದರ ಪರೋಕ್ಷವಾಗಿ ಶೇ. 10ರಿಂದ 30ರಷ್ಟುಹೆಚ್ಚಾಗಲಿದೆ. ಈ ಹೊಸ ನಿಯಮ ವನ್ನು ಮುಂದ್ರಾಂಕ ಮತ್ತು ನೋಂದಣಿ ಇಲಾಖೆ ವಿಶೇಷ ಸೂಚನೆಯಡಿ ಪ್ರಸ್ತಾಪ ಮಾಡಲಾಗಿದೆ. ಇದಕ್ಕೆ ಮೌಲ್ಯಮಾಪನ ಕೇಂದ್ರ ಸಮಿತಿ ಒಪ್ಪಿಗೆ ಪಡೆದು ಅದೇಶ ಹೊರಡಿಸಲಾಗಿದೆ. ಈ ನಿಯಮ ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ ಮತ್ತು ಮಹಾನಗರ ಪಾಲಿಕೆ , ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಗೆ ಬರಲಿದೆ.
-ಇದೇರೀತಿ ಗೊಟ್ಟಿಗೆರೆ ಮತ್ತು ಕೆಂಗೇರಿ ಸುತ್ತಮುತ್ತ ನೋಡಿದರೆ ಶೇ.30 ವರೆಗೂ ಏರಿಕೆಯಾಗುತ್ತದೆ. ಇತರ ಮಹಾನಗರಗಳಲ್ಲೂ ಈ ರೀತಿ ದರ ಏರಿಕೆಯಾಗಲಿದೆ.
ವರದಿ: ಕನ್ನಡಪ್ರಭ
