ಅತ್ಯಾಚಾರ ಎಸಗುವಾಗ ಬಾಯಲ್ಲಿ ಈರುಳ್ಳಿ ತುರುಕಿ ಹತ್ಯೆ: ಜೀವಾವಧಿ ಶಿಕ್ಷೆ

https://static.asianetnews.com/images/authors/b348a094-0bef-5801-a1f6-61e57071185f.jpg
First Published 21, Jul 2018, 8:32 AM IST
Rape Convict Get Life Sentence From High Court
Highlights

12 ವರ್ಷದ ಬಾಲಕಿ ಮೇಲೆ 29 ವರ್ಷದ ದುರುಳನೋರ್ವ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಇದೀಗ ಹೈಕೋರ್ಟ್ ಜೀವಾವಧಿ ಶಿಕ್ಷೆ  ವಿಧಿಸಿ ತೀರ್ಪು ನೀಡಿದೆ. 

ಬೆಂಗಳೂರು :  ಅತ್ಯಾಚಾರ ಎಸಗುತ್ತಿದ್ದಾಗ ಕಿರುಚಾಡಿದ ಅಪ್ರಾಪ್ತೆಯ ಬಾಯಲ್ಲಿ ಈರುಳ್ಳಿ ತುರುಕಿ, ಮೂಗು ಮುಚ್ಚಿ ಕೊಲೆ ಮಾಡಿದ ಅಪರಾಧಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆ ಕಾಯಂ ಮಾಡಿದೆ. 

ನಗರದ ಮೈಕೋಲೇಔಟ್‌ನಲ್ಲಿ ಅತ್ಯಾಚಾರ ಎಸಗಿದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಾಲಿನಿನಗರದ ನಿವಾಸಿ ಸುಕುಮಾರ್ ಈಗ ಕಂಬಿ ಎಣಿಸಬೇಕಿ ದೆ. ನಾನು ಅತ್ಯಾಚಾರ ಎಸಗಿರುವುದು ನಿಜ. ಅದಕ್ಕಾಗಿ ಅಧೀನ ನ್ಯಾಯಾಲ ಯವು 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ ನಾನು10 ವರ್ಷ ಜೈಲು ಶಿಕ್ಷೆ ಅನುಭವಿದ್ದೇನೆ. ಆದರೆ, ನಾನು ಕೊಲೆ ಮಾಡುವ ಉದ್ದೇಶ ಹೊಂದಿರಲಿಲ್ಲ. ಲೈಂಗಿಕ ಸಂಪರ್ಕಕ್ಕೆ ಯತ್ನಿಸುತ್ತಿದ್ದ ವೇಳೆ ಅಪ್ರಾಪ್ತೆ ಕಿರುಚಾಡುತ್ತಿದ್ದಳು. ಆಕೆಯನ್ನು ಸುಮ್ಮನಿರಿಸಲು ಬಾಯಿಗೊಳಗೆ ಈರುಳ್ಳಿ ಹಾಕಿದ್ದೆ. 

ಈರುಳ್ಳಿ ಗಂಟಲಲ್ಲಿ ಸಿಲುಕಿ ಉಸಿರಾಡದೇ ಸಾವನ್ನಪ್ಪಿದ್ದಾಳೆ. ಆದ್ದರಿಂದ ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಅಪ್ರಾಪ್ತಳ ಬಾಯಿಯೊಳಗೆ ಬಲವಂತವಾಗಿ ಈರುಳ್ಳಿಯನ್ನು ಹಾಕಲಾಗಿದೆ. ಬಾಲಕಿ ಕೊನೆಯುಸಿರೆಳೆದಾಗ ಆಕೆಯ ಗಂಟಲಲ್ಲಿ ಈರುಳ್ಳಿ ಇತ್ತು. 

ಮೇಲಾಗಿ ಆಕೆಯ ಮೂಗು ಹಾಗೂ ಬಾಯಿ ಮುಚ್ಚಿ ದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ ಎಂದು ಶವಪರೀಕ್ಷೆ ನಡೆಸಿದ್ದ ವೈದ್ಯರು ಸಾವಿಗೆ ಕಾರಣವನ್ನು ದೃಢಪಡಿಸಿದ್ದರು. ಹೆಚ್ಚುವರಿ ರಾಜ್ಯ ಅಭಿಯೋಜಕ ವಿಜಯ ಕುಮಾರ್ ಮಜಗೆ ಅವರು ಶವಪರೀಕ್ಷೆಯ ವರದಿ ಕೋರ್ಟ್‌ಗೆ ಸಲ್ಲಿಸಿ, ಸುಕುಮಾರ್ ಕೊಲೆ ಮಾಡಿರುವುದಾಗಿ ಬಲವಾಗಿ ವಾದ ಮಂಡಿಸಿ ದ್ದರು. ಈ ವಾದ ಪರಿಗಣಿಸಿದ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ಮತ್ತು ನ್ಯಾಯಮೂರ್ತಿ ಬಿ.ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ, ಕೊಲೆ ಪ್ರಕರಣ ಸಂಬಂಧ ಮೇಲ್ಮನವಿದಾರ ಸುಕುಮಾರ್‌ಗೆ ನಗರದ 50 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಯಂಗೊಳಿಸಿ, ಮೇಲ್ಮನವಿ ವಜಾಗೊಳಿಸಿತು. 

ಪ್ರಕರಣವೇನು .. ? :  ಮೂಲತಃ ಉಡುಪಿ ಜಿಲ್ಲೆಯ ಸುಕುಮಾರ್(29), ಮೈಕೋಲೇಔಟ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಸಂಬಂಧಿಕರಿದ್ದ ಬಾಡಿಗೆ ಮನೆಗೆ ಆಗ್ಗಾಗೆ ಬರುತ್ತಿದ್ದ. 2007 ರಲ್ಲಿ ಸಂಬಂಧಿಕರ ಮನೆಗೆ ಬಂದಿದ್ದ ಆತ, ಕಿಟಕಿಯೊಳಗಿರುವ ಬೀಗ ತೆಗೆದುಕೊಡುವಂತೆ ಮನೆಯ ಮಾಲಿಕರ 12 ವರ್ಷದ ಪುತ್ರಿ ಯನ್ನು ಕರೆದುಕೊಂಡು ಹೋಗಿದ್ದ. ಬೀಗದ ಕೈ ತೆಗೆದುಕೊಂಡಿದ್ದ ಬಾಲಕಿಯನ್ನು ಬಾಗಿಲು ತೆರೆದ ನಂತರ ಪುಸಲಾಯಿಸಿ ಅಡುಗೆ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ವೇಳೆ ಬೆದರಿದ್ದ ಬಾಲಕಿ ಕಿರುಚಾಡತೊಡಗಿದ್ದಳು. ಹೀಗಾಗಿ ಬಾಲಕಿಯ ಬಾಯಿಗೆ ಸುಕುಮಾರ್ ಬಲವಂತವಾಗಿ ಈರುಳ್ಳಿಯನ್ನು ತುರುಕಿದ್ದ. ಸಾಲದೆ ಬಾಲಕಿಯ ಬಾಯಿ ಹಾಗೂ ಮೂಗು ಮುಚ್ಚಿದ್ದ. ಉಸಿರಾಡಲು  ಸಾಧ್ಯವಾಗದೆ ಬಾಲಕಿ ಮೃತಪಟ್ಟಿದ್ದಳು.

loader