ಅತ್ಯಾಚಾರಿಗೆ ಗಲ್ಲು ಶಿಕ್ಷೆ ವಿಧಿಸಿದ ರಾಮನಗರ ಕೋರ್ಟ್

First Published 24, Jan 2018, 12:59 PM IST
Rape Convict Get Life Sentence
Highlights

ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣ ಸಂಬಂಧ ರಾಮನಗರ ಜಿಲ್ಲಾ ನ್ಯಾಯಾಲಯವು ಮಹತ್ವದ ತೀರ್ಪನ್ನು ನೀಡಿದೆ. ಬೆಂಗಳೂರಿನ ಗೌರಿಪಾಳ್ಯ ನಿವಾಸಿ ಸಲೀಂ (45) ಎಂಬಾತನ ವಿರುದ್ಧ  ಜೀವಾವಧಿ, ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪನ್ನು ಪ್ರಕಟಿಸಿದೆ.

ರಾಮನಗರ (ಜ.24)  ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣ ಸಂಬಂಧ ರಾಮನಗರ ಜಿಲ್ಲಾ ನ್ಯಾಯಾಲಯವು ಮಹತ್ವದ ತೀರ್ಪನ್ನು ನೀಡಿದೆ. ಬೆಂಗಳೂರಿನ ಗೌರಿಪಾಳ್ಯ ನಿವಾಸಿ ಸಲೀಂ (45) ಎಂಬಾತನ ವಿರುದ್ಧ  ಜೀವಾವಧಿ, ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪನ್ನು ಪ್ರಕಟಿಸಿದೆ.

 2012ರಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯ್ಯಲಾಗಿತ್ತು. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು. ಈ ಸಂಬಂಧ  ವಿಚಾರಣೆ ನಡೆಸಿದ ಇಲ್ಲಿನ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗೋಪಲಕೃಷ್ಣ ರೈ ಅವರು ಅತ್ಯಾಚಾರಕ್ಕೆ 10 ವರ್ಷ ಜೈಲು, ಕೊಲೆ ಮಾಡಿದ್ದಕ್ಕೆ ಮರಣ ದಂಡನೆ  ವಿಧಿಸಿದ್ದಾರೆ.

loader