ಬಿಡದಿ ಸ್ವಾಮಿ ನಿತ್ಯಾನಂದನಿಗೆ ಬಂಧನ ಭೀತಿ

ಕಾಮಿ ಸ್ವಾಮಿ ನಿತ್ಯಾನಂದಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದು ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದವ ಅನಿವಾರ್ಯವಾಗಿ ಹಾಜರಾಗಲೇಬೇಕಿದೆ.

Rape case against Nithyananda Ramnagar Court Issues non bailable warrant

ರಾಮನಗರ(ಸೆ.6]  ರಾಸಲೀಲೆ ಪ್ರಕರಣದಲ್ಲಿ ಬಿಡದಿಯ ನಿತ್ಯಾನಂದ ಸ್ವಾಮಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ವಾರೆಂಟ್ ಜಾರಿ ಮಾಡಿದೆ.

ನ್ಯಾಯಾಧೀಶ ಗೋಪಾಲಕೃಷ್ಣ ರೈ ವಾರೆಂಟ್ ಹೊರಡಿಸಿದ್ದು ನ್ಯಾಯಲಯದ ವಿಚಾರಣೆಗೆ ಗೈರು ಹಾಜರಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.ಕಳೆದು ಮೂರು ವಿಚಾರಣೆಗೆ ನಿತ್ಯಾನಂದ ಗೈರಾಗಿದ್ದ. 

 ನಿತ್ಯಾನಂದ ಶಿಷ್ಯರು ಹೈಕೋರ್ಟ್ ಮೆಟ್ಟಿಲೇರಿದ್ದೇಕೆ?

ಪ್ರಮುಖ ಸಾಕ್ಷಿ ಲೆನಿನ್ ಕುರುಪ್ಪನ್ ನ ವಿಚಾರಣೆ ವೇಳೆ ಹಾಜರಾಗಬೇಕಿದ್ದ ನಿತ್ಯಾನಂದ ಅಂದೂ ಸಹ ಗೈರಾಗಿದ್ದ. ಎರಡು ದಿನ ಇನ್ ಕ್ಯಾಮೆರಾ ಪ್ರೊಸೆಡಿಂಗ್ ಮೂಲಕ ವಿಚಾರಣೆ ನಡೆದಿತ್ತು. ವಿಚಾರಣೆಗೆ ಹಾಜರಾಗದೇ ಕೇಸ್ ನಿಧಾನಗತಿಯಲ್ಲಿ ಸಾಗಲು ನಿತ್ಯಾನಂದ ಪ್ರಯತ್ನ ಮಾಡುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ವಿಚಾರಣೆಯನ್ನ ಇದೇ ಸೆಪ್ಟೆಂಬರ್ ತಿಂಗಳ 14ಕ್ಕೆ ನ್ಯಾಯಾಲಯ ಮುಂದೂಡಿದೆ.

Latest Videos
Follow Us:
Download App:
  • android
  • ios