ಯಾಕಂದರೆ ಕಾಲೇಜಿನಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಡೆದುಕೊಂಡಿದ್ದಳು. ಎರಡೂ ವರ್ಷಗಳಲ್ಲೂ ಫಸ್ಟ್ ರ‌್ಯಾಂಕ್​ ಸ್ಟೂಡೆಂಟ್​ ಆಗಿದ್ದಳು.

ಹಾಸನದ ಲೇಡಿ ಕಿಲ್ಲರ್ಸ್​ ಗ್ಯಾಂಗ್​ ನ ಬಗ್ಗೆ ಕೆದಕುತ್ತಾ ಹೋದರೆ ನಿಮ್ಮನ್ನು ಬೆಚ್ಚಿ ಬೀಳಿಸೋ ಸಂಗತಿಗಳಿವೆ. ಆ ಗ್ಯಾಂಗ್​ನಲ್ಲಿ ಅವಿದ್ಯಾವಂತರಿರಲಿಲ್ಲ, ಇಂಜಿನಿಯರ್​, ಡಾಕ್ಟರ್​ ಆಗಬೇಕೆಂದು ಓದುತ್ತಿದ್ದವರು ವಿದ್ಯಾರ್ಥಿನಿಯರಿದ್ದರು.

ವತ್ಸಲಾ, ಅಕ್ತರ್​ ಉನ್ನೀಸಾ, ಸಣ್ಣಮ್ಮ ಅನ್ನೋರನ್ನು ಕೊಲೆ ಮಾಡಿದ ಹಾಸನದ ಲೇಡಿ ಕಿಲ್ಲರ್ಸ್​ ಗ್ಯಾಂಗ್​ನಲ್ಲಿ ಓರ್ವ ಇಂಜಿನಿಯರಿಂಗ್​ ವಿದ್ಯಾರ್ಥಿನಿ ಇದ್ದಾಳೆ. ಅವಳೇ ಈ ಶ್ರೀನಿಧಿ. ಇವಳು ಕಿಲ್ಲರ್ ಗ್ಯಾಂಗ್​ ಲೀಡರ್​ ರೂಪಾಳ ಅಕ್ಕನ ಮಗಳು. ಅಂದ್ರೆ ಪಾರ್ವತಿಯ ಮಗಳು. ಹಾಸನದ ಬೊಮ್ಮನಾಯಕನಹಳ್ಳಿಯಲ್ಲಿ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ ಪಾರ್ವತಿಯ ಮಗಳು ಈ ಶ್ರೀನಿಧಿ, ರಾಜೀವ್​ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಎರಡನೇ ವರ್ಷದ ಕಂಪ್ಯೂಟರ್ ಸೈನ್ಸ್​ ಅಂಡ್​ ಇಂಜಿನೀಯರಿಂಗ್​ ಓದುತ್ತಿದ್ದಳು. ಮೂರು ಮಹಿಳೆಯರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರೋ ಶ್ರೀನಿಧಿ ಕೊಲೆ ಹಂತಕಿ ಅಲ್ಲದೇ ನಾಟಕಗಾತಿಯೂ ಹೌದು. ಯಾಕಂದರೆ ಕಾಲೇಜಿನಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ನಡೆದುಕೊಂಡಿದ್ದಳು. ಎರಡೂ ವರ್ಷಗಳಲ್ಲೂ ಫಸ್ಟ್ ರ‌್ಯಾಂಕ್​ ಸ್ಟೂಡೆಂಟ್​ ಆಗಿದ್ದಳು. ಶ್ರೀನಿಧಿ ಮೂರು ಕೊಲೆಗಳಲ್ಲಿ ಭಾಗಿಯಾಗಿರೋ ವಿಷಯ ಕಾಲೇಜಿನ ಪ್ರಾಧ್ಯಾಪಕರಿಗೆ ಶಾಕ್​ ಆಗುವಂತೆ ಮಾಡಿದೆ.

ಮನೆಯವರೆ ಕೊಲೆಗಡುಕಿ ಮಾಡಿದ್ದರು

ಇಂಜಿನೀಯರಿಂಗ್​ ಓದಿ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಗಳಿಸಬೇಕಾದ ಶ್ರೀನಿಧಿಯನ್ನು ಮನೆಯವರೇ ಕೊಲೆಗಡುಕಿ ಮಾಡಿದ್ದರು. ಫ್ಯಾಮಿಲಿ ಕಿಲ್ಲರ್​ ಗ್ಯಾಂಗ್​ ನಲ್ಲಿ ಶವ ಸಾಗಿಸೋ ಕೆಲಸ ಹಾಗೂ ಸಾಂದರ್ಭಿಕ ನಾಟಕ ಮಾಡುತ್ತಿದ್ದಳು ಇಂಜಿನಿಯರಿಂಗ್​ ಸ್ಟೂಡೆಂಟ್​ ಶ್ರೀನಿಧಿ. ಇವಳ ಪಾಪಕೃತ್ಯಗಳು ಅವಳ ನಿಕೃಷ್ಟ , ನಿಷ್ಕರುಣಿ ಮನಸ್ಥಿತಿಗೆ ಸಾಕ್ಷಿಯಾಗಿವೆ.