ಅತ್ತಿಬೆಲೆಯ ಯುವಕ ರಂಜಿತ್ ಕುಮಾರ್ ಆತ್ಮಹತ್ಯೆ ಕೇಸ್ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕೇಸ್ನ್ನ ಮುಚ್ಚಿ ಹಾಕುವಂತೆ ಸ್ಥಳೀಯ ಶಾಸಕ ಶಿವಣ್ಣ ಎಸ್ಐ ಶ್ರೀನಿವಾಸ್ ಮೇಲೆ ಒತ್ತಡ ಹೇರಿದ್ದಾರೆ. ಈ ಬಗ್ಗೆ ಸುವರ್ಣನ್ಯೂಸ್'ಗೆ ಎಸ್'ಐ ಶ್ರೀನಿವಾಸ್ ಹಾಗೂ ಶಾಸಕ ಶಿವಣ್ಣರ ಸಂಭಾಷಣೆಯ ಆಡಿಯೋ ಕ್ಲಿಪ್ ಸಿಕ್ಕಿದೆ. ಅದರ ಒಂದು ಎಕ್ಸ್'ಕ್ಲೂಸಿವ್ ಸ್ಟೋರಿ ನಿಮ್ಮ ಮುಂದೆ.
ಬೆಂಗಳೂರು(ನ. 12): ಅತ್ತಿಬೆಲೆಯಲ್ಲಿ ಯುವಕ ರಂಜಿತ್ ಕುಮಾರ್ ಸೂಸೈಡ್ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. ಪ್ರಕರಣವನ್ನು ಮುಚ್ಚಿಹಾಕುವಂತೆ ಅತ್ತಿಬೆಲೆ ಪಿಎಸ್'ಐ ಶ್ರೀನಿವಾಸ್'ಗೆ ಸ್ಥಳೀಯ ಶಾಸಕ ಶಿವಣ್ಣ ಒತ್ತಡ ಹಾಕಿರೋದು ಬೆಳಕಿಗೆ ಬಂದಿದೆ. ಮೊದಲಿಗೆ ಎಸ್'ಐ ಶ್ರೀನಿವಾಸ್ಗೆ ಕರೆ ಮಾಡಿದ ಶಾಸಕ ಶಿವಣ್ಣ, ಸೂಸೈಡ್ ಕಂಪ್ಲೇಂಟ್ ಬಗ್ಗೆ ಯಾವುದೇ ಆ್ಯಕ್ಷನ್ ತಗೆದುಕೊಳ್ಳಬಾರದೆಂದು ತಾಕೀತು ಮಾಡಿದ್ದು ತಿಳಿದುಬಂದಿದೆ.
ಶಾಸಕ ಮತ್ತು ಶಿವಣ್ಣ ಸಂಭಾಷಣೆ ವಿವರ:
ಶಾಸಕ ಶಿವಣ್ಣ : ಹಲೋ
ಎಸ್ಐ ಶ್ರೀನಿವಾಸ್ : ನಮಸ್ತೆ ಅಣ್ಣ ನಮಸ್ತೆ
ಶಾಸಕ ಶಿವಣ್ಣ : ಏನಿಲ್ಲ ಅದ್ಯಾವುದೋ ಮಂಚನಹಳ್ಳಿದು ಕಂಪ್ಲೇಂಟ್ ಬಂದಿರಬೇಕಲ್ಲ
ಎಸ್ಐ ಶ್ರೀನಿವಾಸ್ : ಮಂಚೇನಹಳ್ಳಿದು
ಶಾಸಕ ಶಿವಣ್ಣ: ಸತ್ತೋಗಿದ್ನಲ್ಲ.. ಸೂಸೈಡ್ ಅಲ್ಲ
ಎಸ್'ಐ ಶ್ರೀನಿವಾಸ್ : ಹಾಂ ಅಣ್ಣ ಪಾಪ.. ಹೆಸರೆಲ್ಲಾ ಬರೆದಿಟ್ಟು ಬಿಟ್ಟಿದ್ದಾನೆ ಪಾಪ
ಶಾಸಕ ಶಿವಣ್ಣ : ಅದು ಗೊತ್ತು, ಏನಾಗಿದೆ ಅಲ್ಲಿ.. ಅವರು ಬಂದು ಎಸ್ಸಿಗಳು
ಎಸ್ಐ ಶ್ರೀನಿವಾಸ್ : ಅವರು ಕುರುಬರು ಅಂತೆ
ಶಾಸಕ ಶಿವಣ್ಣ : ಸದ್ಯಕ್ಕೆ ಏನು ಆಕ್ಷನ್ ತಗೋಬೇಡ ನಾನು ನಾರಾಯಣಸ್ವಾಮಿಗೆ ಹೇಳಿದಿನಿ.. ಪಾಪ ಏನೋ ಕಾಂಪ್ರಮೈಸ್ ಮಾಡೋಣ
ಎಸ್ಐ ಶ್ರೀನಿವಾಸ್ : ಅವ್ರು ಕುರುಬರು ಇವ್ರು ಕುರುಬರಂತೆ
ಶಾಸಕ ಶಿವಣ್ಣ : ಹುಡ್ಗಿ ಕಡೆಯವ್ರು ಎಸ್ಟಿಗಳು.. ಅದಕ್ಕೇನೆ ಅವ್ರು ತಂದೆ ತಾಯಿ ಹತ್ತಿರ ಮಾತಾಡೋಣ..
ಎಸ್ಐ ಶ್ರೀನಿವಾಸ್ : ಎಲ್ಲಾ ಟಿವಿಗಳಿಗೂ ಗೊತ್ತಾಗಿದೆ..
ಶಾಸಕ ಶಿವಣ್ಣ : ಇಲ್ಲ ಇಲ್ಲ ಯಾರಿಗೂ ಗೊತ್ತಾಗಿಲ್ಲ ನಾನು ಮಾತನಾಡಿದ್ದೀನಿ
ಇದಲ್ಲದೆ ಪುನಃ ಕರೆಮಾಡಿ, "ಅವರು, ನಮ್ ಹುಡುಗ್ರು ಏನು ಆಕ್ಷನ್ ತಗೋಬೇಡ, ಎಲ್ಲಾ ಆಫೀಸರ್ಸ್ ಹತ್ತಿರ ಮಾತನಾಡಿದಿನಿ" ಎನ್ನುತ್ತಾರೆ.
ಶಾಸಕ ಶಿವಣ್ಣ : ಹಲೋ ಶ್ರೀನಿವಾಸ್ ಅದೇ ಅವ್ರೆಲ್ಲಾ ಮಾತಾಡ್ತಿದ್ದಾರೆ.. ಅದನ್ನು ಸೆಟ್ಲ್ ಮಾಡ್ತಾರೆ. ಅವರ ಫ್ಯಾಮಿಲಿಯವರು.. ಅದನ್ನ ಏನು ಮಾಡಬೇಡ ನಮ್ ಹುಡುಗ್ರು ಅವ್ರು.
ಎಸ್'ಐ ಶ್ರೀನಿವಾಸ್ : ಸರ್ ಅದು ಸ್ಪ್ರೆಡ್ ಆಗಿದೆ ಎಲ್ಲಾ ಕಡೆ ಸರ್.. ಆಫಿಸರ್ಗೆಲ್ಲಾ ಸ್ಪ್ರೆಡ್ ಆಗಿದೆ
ಶಾಸಕ ಶಿವಣ್ಣ : ಏನು ಆಗಲ್ಲ. ಅಲ್ಲಿ ಬೇಕಾದ್ರೂ ಬಂದು ಹಾಕೊಳ್ಳಿ.. ಅವ್ರು ಬಂದು ಕಾಂಪ್ರಮೈಸ್ ಮಾಡ್ಕೋತಾರೆ.. ಅವರ ಹಿಂದೆ ಯಾರ್ಯಾರು ಇದ್ದಾರೆ ಅವ್ರತ್ರ ಮಾತಾಡ್ತಿನಿ
ಎಸ್'ಐ ಶ್ರೀನಿವಾಸ್ : ಸರಿ ಸರ್ ಸರಿ ಸರ್
ಶಾಸಕ ಶಿವಣ್ಣ : ಯಾಕಂದ್ರೆ ನಮ್ ಹುಡುಗರು ಆಮೇಲೆ ನಮ್ ಜೊತೆಯಲ್ಲಿರೋ ಹುಡುಗ್ರು ಏನು ಆಗೋದುಬೇಡ
ಎಸ್ಐ ಶ್ರೀನಿವಾಸ್ : ಸರಿ ಸರ್ ಸರಿ ಸರ್
ಇನ್ನು ಇದಾದ್ಮೇಲೆ ಸತ್ತವ್ನು ಏನ್ ಎದ್ದು ಬರ್ತಾನಾ..? ಏನಾಗಲ್ಲ ಬ್ಯಾಲೆನ್ಸ್ ಮಾಡಪ್ಪ ಅಂತ ಶ್ರೀನಿವಾಸ್'ಗೆ ಶಾಸಕ ಶಿವಣ್ಣ ಧಮ್ಕಿ ಹಾಕಿದ್ದಾರೆ..
ಶಾಸಕ ಶಿವಣ್ಣ : ಅವ್ರೆನೋ ಮಾತಾನಾಡ್ಕೊಂಡಿದಾರಂತೆ ಅದುನ್ನ ಕ್ಲೋಸ್ ಮಾಡಿ ಕೊಂಡಿದ್ದಾರಂತೆ
ಎಸ್'ಐ ಶ್ರೀನಿವಾಸ್ : ಸರ್ ಅದು ಡೆತ್ ನೋಟ್ ಸಿಕ್ಕಿದ್ಯಲ್ಲಾ.. ಮೀಡಿಯಾಗೆಲ್ಲಾ ಸ್ಪ್ರೆಡ್ ಆಗಿದೆ..
ಶಾಸಕ ಶಿವಣ್ಣ : ಈಗ ಸಮಸ್ಯೆ ಏನಾಗುತ್ತೆ.. ಇದ್ರೆ ಕೇಳೋದು ಸರಿ.. ಏನಾಗಲ್ಲ ಸ್ವಲ್ಪ ಬ್ಯಾಲೆನ್ಸ್ ಮಾಡಪ್ಪ.. ಅದು ಅವ್ನೇ ಬರೆದ್ನಾ..? ಬೇರೆಯವ್ರು ಮಾಡಿದ್ರಾ ಯಾರಿಗೊತ್ತು..? ಇವಾಗ ಅವ್ನು ಸತ್ತೋಗಿದ್ದಾನೆ.. ಅದಕ್ಕೆ ಬೇರೆಯವರ ಲೈಫ್ ಹಾಳು ಮಾಡೋದು ಸರಿಯಿರುತ್ತಾ..? ಏನೋ ಒಂದು ಮಾಡಿ ಹೆಲ್ಪ್ ಮಾಡಪ್ಪ... ಏನಾಗಲ್ಲ ಇಬ್ರೂ ಕಾಂಪ್ರಮೈಸ್ ಮಾಡ್ಕೊಂಡಿದ್ದಾರೆ.
ಎಸ್'ಐ ಶ್ರೀನಿವಾಸ್ : ಹಂ.. ಹಂ..
ಶಾಸಕ ಶಿವಣ್ಣ : ನೀನೇನು ತಲೆ ಕಡೆಸ್ಕೋಬೇಡ ನಾನು ಯಾರತ್ರ ಮಾತಾಡ್ಬೇಕೋ ಅವ್ರ ಹತ್ತಿರ ಮಾತಾಡ್ತೀವಿ
ಎಸ್'ಐ ಶ್ರೀನಿವಾಸ್ : ಸರಿ ಸರ್
ಶಾಸಕ ಶಿವಣ್ಣ : ಯಾರಿಗೂ ತೊಂದ್ರೆ ಆಗ್ಬಾರ್ದು ಮ್ಯಾನೇಜ್ ಮಾಡು
ಎಸ್ ಐ ಶ್ರೀನಿವಾಸ್ : ಸರಿ ಸರ್ ಸರಿ ಸರ್
ನಮ್ ಹುಡುಗ್ರು ನಮ್ ಪಾರ್ಟಿ ಲೀಡರ್ಸ್'ನ ಚೆನ್ನಾಗಿ ನೋಡ್ಕೋಬೇಕು. ಏನು ಸಮಸ್ಯೆ ಆಗದೇ ಇದ್ದ ಹಾಗೆ ನೋಡ್ಕೋಬೇಕಪ್ಪ ನೀನು ಎಂದಿದ್ದಾರೆ.
ಶಾಸಕ ಶಿವಣ್ಣ : ನಮ್ ಪಾರ್ಟಿ ಲೀಡರ್'ಗೆ ಕಾರ್ಯಕರ್ತರಿಗೆ ಏನು ಸಮಸ್ಯೆ ಆಗದೆ ಇರೋ ಹಾಗೆ ನೋಡ್ಕೋಬೇಕು
ಎಸ್'ಐ ಶ್ರೀನಿವಾಸ್ : ಸರಿ ಅಣ್ಣ
ಶಾಸಕ ಶಿವಣ್ಣ: ನಿನ್ ಜವಾಬ್ದಾರಿ
ಎಸ್ ಐ ಶ್ರೀನಿವಾಸ್ : ಆಯ್ತು ಅಣ್ಣ
ಶಾಸಕ ಶಿವಣ್ಣ : ಇನ್ಮೇಲೆ ನಮ್ ಪಾರ್ಟಿ ಲೀಡರ್, ಕಾರ್ಯಕರ್ತರು ನೆಕ್ಸ್ಟ್ ಬಂದು ಏನು ಹೇಳ್ಬಾರದು ನಂಗೆ
ಎಸ್ ಐ ಶ್ರೀನಿವಾಸ್ : ಸರಿ ಅಣ್ಣ
ಶಾಸಕ ಶಿವಣ್ಣ : ಇವಾಗೇನೋ ಆಗಿದೆ ನೆಕ್ಸ್ಟ್ ಹೀಗೆ ಆಗ್ಬಾರ್ದು
ಎಸ್ ಐ ಶಿವಣ್ಣ : ಸರಿ ಸರಿ
ಶಾಸಕ ಶಿವಣ್ಣ : ನಮ್ ಕೌನ್ಸಿಲರ್'ಗಳು, ಪಾರ್ಟಿ ಲೀಡರ್'ಗಳು, ನಮ್ ಕಾಂಗ್ರೆಸ್'ನವ್ರು ಬಂದಾಗ ಅವ್ರನ್ನು ಕರೆಸಿ, ಅವ್ರ ಕಷ್ಟ ಸುಖ ವಿಚಾರಿಸಿ ಒಳ್ಳೆ ರೀತಿನಲ್ಲಿ ವಿಚಾರಿಸಿ ಒಳ್ಳೆ ರೀತಿಯಲ್ಲಿ ಮಾಡ್ಕೊಂಡು ಹೋಗು
ಎಸ್ ಐ ಶ್ರೀನಿವಾಸ್ : ಸರಿ ಸರಿ
ಇಷ್ಟೆಲ್ಲಾ ಆದ್ಮೇಲೂ ಶ್ರೀನಿವಾಸ್ ತಲೆಕೆಡಿಸಿಕೊಂಡಿಲ್ಲ.. ಡೆತ್ ನೋಟ್ ನಲ್ಲಿ ಆರೋಪಿಗಳ ಹೆಸ್ರು ಹಾಕಿದ್ದ ಹಿನ್ನೆಲೆ ಸುಮೋಟೋ ದೂರನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸುತ್ತಾರೆ.. ಅದಕ್ಕೆ ಮತ್ತೆ ಧಮ್ಕಿ ಹಾಕ್ತಾರೆ ಎಂ ಎಲ್ ಎ ಸಾಹೇಬ್ರು..
ಎಸ್'ಐ ಶ್ರೀನಿವಾಸ್: ಹಂ ಅದು ಸುಮೋಟೋ ಮಾಡ್ಕೊಂಡಿದ್ದೀವಿ
ಶಾಸಕ ಶಿವಣ್ಣ : ಸುಮೋಟೋ ಅಂದ್ರೆ ಏನು..?
ಎಸ್'ಐ ಶ್ರೀನಿವಾಸ್ : ಅಂದ್ರೆ ಡೆತ್ ನೋಟ್'ನಲ್ಲಿ ಸಿಕ್ಕಿತ್ತಲ್ಲಾ ಅದರ ಆಧಾರದ ಮೇಲೆ ಮಾಡ್ಕೊಂಡಿದ್ದೀವಿ
ಶಾಸಕ ಶಿವಣ್ಣ : ಆಯ್ತು ನಾವು ಇಷ್ಟೆಲ್ಲಾ ಹೇಳಿದ್ಮೇಲೂ ಮ್ಯಾನೇಜ್ ಮಾಡೋಕೆ ಆಗಿಲ್ವಾ..?
ಎಸ್'ಐ ಶ್ರೀನಿವಾಸ್ : ನಿಮ್ಗೆ ಎಲ್ಲಾ ವಿಷಯ ಹೇಳಿದ್ದೀನಿ
ಶಾಸಕ ಶಿವಣ್ಣ : ನೀನು ಎಲ್ಲ ಅತಿಯಾಗಿ ಮಾಡ್ತೀಯಾ
ಎಸ್'ಐ ಶ್ರೀನಿವಾಸ್ : ಇದು ಎಲ್ಲಾ ಕಡೆ ಸ್ಪ್ರೆಡ್ ಆಗಿದೆ
ಶಾಸಕ ಶಿವಣ್ಣ : ಯಾವ ಸ್ಪ್ರೆಡ್ ಕೂಡ ಆಗಿಲ್ಲ. ಸುಮ್ನೆ ಇರಪ್ಪ
ಎಸ್'ಐ ಶ್ರೀನಿವಾಸ್ : ಸೇಮ್ ಮಡಿಕೇರಿಯಲ್ಲಿ ಇನ್ಸಿಡೆಂಟ್ ಆಯ್ತಲ್ಲ ಅದೇ ರೀತಿ ಆಗುತ್ತೆ
ಶಾಸಕ ಶಿವಣ್ಣ : ಏನ್ ಮಡಿಕೇರಿ.. ಸರಿನಪ್ಪ ಏನೋ ಮಾಡಪ್ಪ
ಹೀಗೆ ಪ್ರಕರಣವೊಂದರ ಕೇಸ್ ಮುಚ್ಚಿ ಹಾಕಲು ಕಾಂಗ್ರೆಸ್ ಶಾಸಕ ಶಿವಣ್ಣ ಎಸ್ಐ ಶ್ರೀನಿವಾಸ್ ಮೇಲೆ ಸಾಕಷ್ಟು ಒತ್ತಡ ಹಾಕ್ತಾರೆ.. ಪ್ರಕರಣದ ದಿಕ್ಕು ತಪ್ಪಿಸೋಕೆ ನೋಡ್ತಾರೆ.. ಆದ್ರೆ ಈ ಸಂಬಂಧ ವಿಚಾರಣೆ ನಡೆಯುತ್ತಿದ್ದು , ನೊಂದ ಕುಟುಂಬಕ್ಕೆ ನ್ಯಾಯ ಸಿಗುತ್ತಾ ನೋಡಬೇಕು.
- ಕ್ರೈಂ ಬ್ಯೂರೋ ಸುವರ್ಣನ್ಯೂಸ್
