ಮೈಸೂರು :  ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಪತ್ನಿ ರಾಣಿ ತ್ರಿಷಿಕಾ ಕುಮಾರಿ ಅವರು ಆದಿವಾಸಿ ಮಕ್ಕಳ ಕುರಿತು ಸಂಶೋಧನೆ ನಡೆಸಲು ಮುಂದಾಗಿದ್ದಾರೆ.

ಆದಿವಾಸಿ ಮಕ್ಕಳ ಕುರಿತು ಅಧ್ಯಯನ ನಡೆಸಿ ಪಿಎಚ್‌.ಡಿ ಪಡೆಯಲು ಉದ್ದೇಶಿಸಿರುವ ಅವರು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ(ಡಿಡಿಪಿಐ) ಮಂಜುಳಾ ಅವರಿಂದ ಮಾಹಿತಿ ಕಲೆಹಾಕಿದ್ದಾರೆ. ಈ ಸಂದರ್ಭದಲ್ಲಿ ಅವರು ಬುಡಕಟ್ಟು ಮಕ್ಕಳ ನಿತ್ಯಜೀವನ, ಓದಿನ ಗುಣಮಟ್ಟ, ಸರ್ಕಾರದಿಂದ ಬುಡಕಟ್ಟು ಮಕ್ಕಳಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ರಾಜಸ್ಥಾನದ ರಾಜಕೋಟ್‌ ರಾಜಮನೆತನದ ತ್ರಿಶಿಕಾ ದೇವಿ ಅವರು ಜೂನ್‌ 2016ರಲ್ಲಿ ಮೈಸೂರು ರಾಜವಂಶಸ್ಥ ಯದುವೀರ ಒಡೆಯರ್‌ ಅವರನ್ನು ವಿವಾಹವಾಗಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬೆಂಗಳೂರಿನ ಕ್ರೈಸ್ವ್‌ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿರುವ ಅವರು ಇದೀಗ ಸಂಶೋಧನೆ ಬಗ್ಗೆ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಅವರು ಸಂಶೋಧನೆ ನಡೆಸುತ್ತಿರುವ ವಿಶ್ವವಿಶ್ವಾನಿಲಯ, ಸಂಶೋಧನೆ ಸ್ವರೂಪ ಎಂಬಿತ್ಯಾದಿ ವಿವರಗಳು ಲಭ್ಯವಾಗಿಲ್ಲ.