ಮಂಡ್ಯ ತವರು ಕ್ಷೇತ್ರ ಎಂದು ಭಾವಿಸಿ ರಾಜಕಾರಣದಲ್ಲಿ ಬಹು ಬೇಗ ಖ್ಯಾತಿ ಹೊಂದಿದ್ದ ರಮ್ಯಾಗೆ ಈಗ ಸ್ಥಾನ ಸಿಗದೇ ಹೋದರೆ ಮುಂದೆ ಪರ್ಯಾಯ ದಾರಿಗಳನ್ನು ಹುಡುಕುವ ಅನಿವಾರ್ಯತೆಯೂ ಬರುತ್ತದೆ ಎಂದು ರಮ್ಯಾ ಆತಾಯಿ ಹೇಳಿದ್ದಾರೆ.
ಮಂಡ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಯಾದರೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಅನಿವಾರ್ಯತೆ ಬರುವುದರಿಂದ ಮಾಜಿ ಸಂಸದೆ ರಮ್ಯಾ ಮಂಡ್ಯ ರಾಜಕಾರಣದಿಂದ ದೂರ ಸರಿಯುವ ಸಾಧ್ಯತೆ ಹೆಚ್ಚಾಗಿದೆ ಎಂದು ರಮ್ಯಾ ತಾಯಿ ರಂಜಿತಾ ತಿಳಿಸಿದ್ದಾರೆ.
ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು ಮಂಡ್ಯ ತವರು ಕ್ಷೇತ್ರ ಎಂದು ಭಾವಿಸಿ ರಾಜಕಾರಣದಲ್ಲಿ ಬಹು ಬೇಗ ಖ್ಯಾತಿ ಹೊಂದಿದ್ದ ರಮ್ಯಾಗೆ ಈಗ ಸ್ಥಾನ ಸಿಗದೇ ಹೋದರೆ ಮುಂದೆ ಪರ್ಯಾಯ ದಾರಿಗಳನ್ನು ಹುಡುಕುವ ಅನಿವಾರ್ಯತೆಯೂ ಬರುತ್ತದೆ ಎಂದು ಸೂಚ್ಯವಾಗಿ ಹೇಳಿದರು.
ಇದೇವೇಳೆ ಈ ಬಾರಿಯ ಉಪಚುನಾವಣೆಯಲ್ಲಿ ರಮ್ಯಾ ಸ್ಪರ್ಧಿಸದಿದ್ರೆ ನಾನು ಸ್ಪರ್ಧಿಸುವ ಆಸೆ ಹೊಂದಿದ್ದು ಅವಕಾಶ ಸಿಗುತ್ತದೆ ಎಂದು ಭಾವಿಸಿದ್ದೇನೆ. ಆದ್ರೆ ಮೈತ್ರಿಯಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿ ಇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದರು.
