ಇತ್ತೀಚಿನ ದಿನಗಳಲ್ಲಿ ಟ್ವೀಟರ್‌ ಮತ್ತು ಫೇಸ್‌ಬುಕ್‌ನಂಥ ‘ಸಾಮಾಜಿಕ ಮಾಧ್ಯಮ'ಗಳಲ್ಲೇ ಹೆಚ್ಚು ಅಭಿಪ್ರಾಯ ಕ್ರೋಡೀಕರಣ, ವಿಚಾರ-ವಿನಿಮಯಗಳನ್ನು ನಡೆಯತ್ತಿರುವುದನ್ನು ಕೊನೆಗೂ ಮನಗಂಡಿರುವ ಕಾಂಗ್ರೆಸ್‌ ಪಕ್ಷವು, ತನ್ನ ಸಾಮಾಜಿಕ ಮಾಧ್ಯಮ ವಿಭಾಗದ ಪ್ರಮುಖರಾಗಿದ್ದ ದೀಪೇಂದರ್‌ ಹೂಡಾ ಅವರನ್ನು ಬದಲಿಸಿ, ಆ ಸ್ಥಾನಕ್ಕೆ ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ ಅವರನ್ನು ನೇಮಿಸಲು ನಿರ್ಧರಿಸಿತು ಎಂದು ತಿಳಿದುಬಂದಿದೆ. ರಮ್ಯಾ ಅವರು ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆಯಾಗಿ ನೇಮಕವಾದ ವಿಷಯ ಮಂಗಳವಾರ ಗೊತ್ತಾಗಿತ್ತು. ಈ ಬಗ್ಗೆ ಮತ್ತಷ್ಟುಮಾಹಿತಿಗಳು ಬುಧವಾರ ಲಭಿಸಿವೆ.

ನವದೆಹಲಿ(ಮೇ.11): ಇತ್ತೀಚಿನ ದಿನಗಳಲ್ಲಿ ಟ್ವೀಟರ್‌ ಮತ್ತು ಫೇಸ್‌ಬುಕ್‌ನಂಥ ‘ಸಾಮಾಜಿಕ ಮಾಧ್ಯಮ'ಗಳಲ್ಲೇ ಹೆಚ್ಚು ಅಭಿಪ್ರಾಯ ಕ್ರೋಡೀಕರಣ, ವಿಚಾರ-ವಿನಿಮಯಗಳನ್ನು ನಡೆಯತ್ತಿರುವುದನ್ನು ಕೊನೆಗೂ ಮನಗಂಡಿರುವ ಕಾಂಗ್ರೆಸ್‌ ಪಕ್ಷವು, ತನ್ನ ಸಾಮಾಜಿಕ ಮಾಧ್ಯಮ ವಿಭಾಗದ ಪ್ರಮುಖರಾಗಿದ್ದ ದೀಪೇಂದರ್‌ ಹೂಡಾ ಅವರನ್ನು ಬದಲಿಸಿ, ಆ ಸ್ಥಾನಕ್ಕೆ ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ ಅವರನ್ನು ನೇಮಿಸಲು ನಿರ್ಧರಿಸಿತು ಎಂದು ತಿಳಿದುಬಂದಿದೆ. ರಮ್ಯಾ ಅವರು ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆಯಾಗಿ ನೇಮಕವಾದ ವಿಷಯ ಮಂಗಳವಾರ ಗೊತ್ತಾಗಿತ್ತು. ಈ ಬಗ್ಗೆ ಮತ್ತಷ್ಟುಮಾಹಿತಿಗಳು ಬುಧವಾರ ಲಭಿಸಿವೆ.

ದೀಪೇಂದರ್‌ ಹೂಡಾ ಅವರು ಯುವ ತಂಡವೊಂದನ್ನು ಇಟ್ಟುಕೊಂಡು ಕಾಂಗ್ರೆಸ್‌ ಪಕ್ಷದ ಸಾಮಾಜಿಕ ಮಾಧ್ಯಮಗಳನ್ನು ನಿರ್ವಹಿಸುತ್ತಿದ್ದರು. ಆದರೆ ಅವರ ತಂಡ ಮಾಡುತ್ತಿದ್ದ ಟ್ವೀಟ್‌ಗಳು, ಆನ್‌ಲೈನ್‌ ಸಂದೇಶಗಳು ಅಷ್ಟುಪರಿಣಾಮಕಾರಿ ಯಾಗಿರಲಿಲ್ಲ. ಹೀಗಾಗಿ ನರೇಂದ್ರ ಮೋದಿ ಆಡಳಿತದ ವಿರುದ್ಧ ಕೆಲವು ಮೊನಚು ಟ್ವೀಟ್‌ಗಳನ್ನು ಮಾಡಿ ಈಗಾಗಲೇ ಗಮನ ಸೆಳೆದಿರುವ ರಮ್ಯಾ ಅವರನ್ನು ಹೂಡಾ ಸ್ಥಾನಕ್ಕೆ ನಿಯೋಜಿಸಲು ಪಕ್ಷದ ಹೈಕಮಾಂಡ್‌ ನಿರ್ಧರಿ ಸಿತು ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

‘ಕೆಲವು ಮೋದಿ ಅನುಯಾಯಿಗಳು ನೀಡುವ ರೀತಿಯಲ್ಲಿ ಅತಿರೇಕದ ಪ್ರತಿಕ್ರಿಯೆಗಳನ್ನು ನೀಡುವ ಅಗತ್ಯವಿಲ್ಲ. ಮೊನಚಾದ ಮತ್ತು ಪರಿಣಾಮಕಾರಿಯಾದ ಪ್ರತಿಕ್ರಿಯೆಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಬೇಕು' ಎಂಬುದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಆಶಯವಂತೆ. ಆ ಆಶಯಕ್ಕೆ ಅನುಗುಣವಾಗಿ ರಮ್ಯಾ ಕಾರ್ಯನಿರ್ವ ಹಿಸಲಿದ್ದಾರೆ ಎಂಬ ವಿಶ್ವಾಸವನ್ನು ಪಕ್ಷದ ವರಿಷ್ಠರು ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಇದರ ಫಲಶ್ರುತಿಯೆಂಬಂತೆ ಮೋದಿ ಸರ್ಕಾರ ನಕ್ಸಲ್‌ ನಿಗ್ರಹಕ್ಕೆ ‘ಸಮಾಧಾನ್‌' ಯೋಜನೆಯನ್ನು ಇತ್ತೀಚೆಗೆ ಪ್ರಕಟಿಸಿತ್ತು. ಇದಕ್ಕೆ ಕಾಂಗ್ರೆಸ್‌ ಪಕ್ಷ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಟ್ವೀಟರ್‌ನಲ್ಲಿ ಮೊನಚಾದ ಪ್ರತಿಕ್ರಿಯೆಯನ್ನು ಮಂಗಳವಾರ ನೀಡಿತ್ತು. ಇದು ರಮ್ಯಾ ಅವರ ಐಡಿಯಾ ಆಗಿತ್ತು ಎನ್ನಲಾಗಿದೆ.

ರಮ್ಯಾ ಅವರು ಸಾಮಾಜಿಕ ಮಾಧ್ಯಮ ತಂಡವನ್ನು ಬದಲಿಸಲು ಚಿಂತನೆ ನಡೆಸುತ್ತಿದ್ದಾರೆ ಎಂದೂ ಮೂಲಗಳು ಹೇಳಿವೆ. ಆದರೆ ರಮ್ಯಾರನ್ನು ಈ ಸ್ಥಾನಕ್ಕೆ ತಂದು ಕೂಡಿಸಿದ್ದಕ್ಕೆ ಕೆಲ ಹಿರಿಯ ಕಾಂಗ್ರೆಸ್ಸಿಗರು ಅಸಮಾಧಾನ ಹೊಂದಿದ್ದಾರೆ. ಆದರೆ ರಮ್ಯಾಗೆ ಹೈಕಮಾಂಡ್‌ ಶ್ರೀರಕ್ಷೆ ಇದೆ ಎಂದೂ ಟೀವಿ ವಾಹಿನಿ ವರದಿ ಮಾಡಿದೆ.