ಇದಲ್ಲದೆ ಮಂಕಿ ಬಾತ್ ಮೋದಿ ಕಚೇರಿಯ ಪುಸ್ತಕ ನೀಡುವ ಕಾರ್ಯಕ್ರಮದ ಟ್ವೀಟ್'ಅನ್ನು ಸಂವಿಧಾನದ ಪುಸ್ತಕ ನೀಡಿ ಎಂತಲೂ ಟ್ವೀಟ್ ಮಾಡಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಕಾಂಗ್ರೆಸ್'ನ ಸಾಮಾಜಿಕ ಮಾಧ್ಯಮದ ಉಸ್ತುವಾರಿಯನ್ನು ವಹಿಸಿಕೊಂಡ ನಂತರ ಟ್ವಿಟರ್'ನಲ್ಲಿ ಫುಲ್ ಬ್ಯುಸಿಯಾಗಿಬಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ್ದಕ್ಕೆ ಆಕ್ರೋಶಗೊಂಡ ಟ್ವಿಟಿಗರು ಕಾಂಗ್ರೆಸ್ ನಾಯಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗುಜರಾತ್ ಸಿಎಂ ವಿಜಯ್ ರೂಪಾನಿ ಅವರು ' ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟದ ಸಂಬಂಧ ; ಕಾಂಗ್ರೆಸ್'ನ ಇಂತಹ ನಾಟಕಗಳ ಬಗ್ಗೆ ಜನರಿಗೆ ಗೊತ್ತಿದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಹಿಸಿದ ರಮ್ಯಾ ' ಕಾನೂನು ಸುವ್ಯವಸ್ಥೆಯನ್ನು ನೀವು ಒಬ್ಬ ಕೊಲೆಗಡುಕನಿಂದ ಕಲಿತರಲ್ಲವೆ' ಎಂದು ಟ್ವೀಟ್ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ
ಇದಲ್ಲದೆ ಮಂಕಿ ಬಾತ್ ಹಾಗೂ ಮೋದಿ ಕಚೇರಿಯ ಪುಸ್ತಕ ನೀಡುವ ಕಾರ್ಯಕ್ರಮದ ಟ್ವೀಟ್'ಅನ್ನು ಸಂವಿಧಾನದ ಪುಸ್ತಕ ನೀಡಿ ಎಂತಲೂ ಟ್ವೀಟ್ ಮಾಡಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
