ಸ್ಯಾಂಡಲ್ ವುಡ್ ನಟಿ ಕಮ್ ಕಾಂಗ್ರೆಸ್ ನಾಯಕಿ ರಮ್ಯಾ ಅವರು ಹೊಸ ಆಫರ್ ನೀಡಿದ್ದಾರೆ. ಹೌದು ಆದರೆ ಆ ಆಫರ್’ಗೂ ಮುನ್ನ ನೀವು ಅವರು ನೀಡಿರುವ ಸವಾಲಿಗೆ ಉತ್ತರ ಕೊಡಬೇಕು. ರಮ್ಯಾ ಅವರು ತಮ್ಮ ಟ್ವಿಟರ್/ಫೇಸ್ ಬುಕ್ ಪುಟದಲ್ಲಿ, ‘ಓಕೆ ಒಂದು ವೇಳೆ ನೀವು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ, ಗುಜರಾತ್ ಅಥವಾ ಬಿಹಾರ ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ ಫೋಟೋವನ್ನು ಹುಡುಕಿ ಕೊಟ್ಟರೆ 25 ಸಾವಿರ ರೂಪಾಯಿ ನಗದು ನೀಡುವುದಾಗಿ ಸವಾಲು ಹಾಕಿದ್ದಾರೆ.
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಕಮ್ ಕಾಂಗ್ರೆಸ್ ನಾಯಕಿ ರಮ್ಯಾ ಅವರು ಹೊಸ ಆಫರ್ ನೀಡಿದ್ದಾರೆ.
ಹೌದು ಆದರೆ ಆ ಆಫರ್’ಗೂ ಮುನ್ನ ನೀವು ಅವರು ನೀಡಿರುವ ಸವಾಲಿಗೆ ಉತ್ತರ ಕೊಡಬೇಕು. ರಮ್ಯಾ ಅವರು ತಮ್ಮ ಟ್ವಿಟರ್/ಫೇಸ್ ಬುಕ್ ಪುಟದಲ್ಲಿ, ‘ಓಕೆ ಒಂದು ವೇಳೆ ನೀವು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ, ಗುಜರಾತ್ ಅಥವಾ ಬಿಹಾರ ನೆರೆ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವಾನ ಹೇಳಿದ ಫೋಟೋವನ್ನು ಹುಡುಕಿ ಕೊಟ್ಟರೆ 25 ಸಾವಿರ ರೂಪಾಯಿ ನಗದು ನೀಡುವುದಾಗಿ ಸವಾಲು ಹಾಕಿದ್ದಾರೆ.
ರಮ್ಯಾ ಅವರ ಈ ಫೇಸ್ ಬುಕ್ ಫೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದ್ದು, ಈಗಾಗಲೇ ನೂರರಷ್ಟು ಶೇರ್ ಆಗಿದ್ದು, ಟೀಕೆ, ಟಿಪ್ಪಣಿ ಸಮರ ಆರಂಭವಾಗಿದೆ.
ಆದರೆ ಒಂದು ಶರತನ್ನು ಕೂಡಾ ರಮ್ಯಾ ಇಟ್ಟಿದ್ದಾರೆ, ಅದೇನೆಂದರೆ ಅದು ಫೋಟೋಶಾಪ್ ಮಾಡಿರುವ ಫೋಟೋ ಆಗಿರಬಾರದಂತೆ.
